ಧಾರವಾಡದ ‘ಕಿಸಾನ್ ಮಾಲ್’: ಒಂದೇ ಸೂರಿನಡಿ ರಿಯಾಯಿತಿ ದರದಲ್ಲಿ ಕೃಷಿ ಪರಿಕರ ಲಭ್ಯ
ಧಾರವಾಡ, ಜ. 21: ಧಾರವಾಡ ಜಿಲ್ಲೆ ಹಾಗೂ ಸುತ್ತಮುತ್ತಲಿನ ರೈತರ ಅನುಕೂಲಕ್ಕಾಗಿ ತೋಟಗಾರಿಕೆ ಇಲಾಖೆಯು ಇಲ್ಲಿನ ಕುಂಬಾಪುರ ಫಾರ್ಮ್ ಆವರಣದಲ್ಲಿರುವ ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರದಲ್ಲಿ ‘ಕಿಸಾನ್ ಮಾಲ್’ ಅನ್ನು ಸ್ಥಾಪಿಸಿದ್ದು, ರೈತರಿಗೆ ಅಗತ್ಯವಿರುವ ಕೃಷಿ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಒದಗಿಸುತ್ತಿದೆ. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಸ್ಥಾಪಿಸಲಾಗಿರುವ ಈ ಕಿಸಾನ್ ಮಾಲ್‌ನಲ್ಲಿ, ತೋಟಗಾರಿಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅವಶ್ಯಕವಾದ ಬಿತ್ತನೆ ಬೀಜಗಳು, ರಸಗೊಬ್ಬರಗಳು, ಸಾವಯವ ಗೊಬ್ಬರಗಳು, ನೀರಾವರಿ ಪರಿಕರಗಳು, ಕೃಷಿ ಯಂತ್ರೋಪಕರಣಗಳು ಹಾಗೂ ಸಲಕರಣೆಗಳು ಲಭ್ಯವಿವೆ….

