ಸ್ವಚ್ಛತೆಯಿಂದ ಮಾತ್ರ ಸದೃಢ ಆರೋಗ್ಯ ಸಾಧ್ಯ: ಶಾಸಕ ಎನ್. ಎಚ್. ಕೋನರಡ್ಡಿ
ಅಣ್ಣಿಗೇರಿ: ಮಾನವನು ತನ್ನ ದೈನಂದಿನ ಜೀವನದಲ್ಲಿ ಸ್ವಚ್ಛತೆಯನ್ನು ಕಡ್ಡಾಯವಾಗಿ ಪಾಲಿಸಿದಾಗ ಮಾತ್ರ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಶಾಸಕ ಎನ್. ಎಚ್. ಕೋನರಡ್ಡಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ನಗರದಲ್ಲಿ ಹಮ್ಮಿಕೊಂಡಿದ್ದ ‘ಅಣ್ಣಿಗೇರಿ ಸ್ವಚ್ಛತಾ ಆಂದೋಲನ’ದ ಅಂಗವಾಗಿ ಹೊಸಪೇಟಿ ಓಣಿ, ಕುರಬಗೇರಿ ಓಣಿ, ಡಿ.ಎಸ್.ಎಸ್. ನಗರ ಹಾಗೂ ಬನಶಂಕರಿ ದೇವಸ್ಥಾನದ ರಸ್ತೆಗಳಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಣ್ಣಿಗೇರಿ ನಗರವನ್ನು ಸ್ವಚ್ಛ ಮತ್ತು ಸುಂದರವಾಗಿ ಉಳಿಸಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂದು ಶಾಸಕ…

