ನವದೆಹಲಿ:ಸಂಸತ್ತಿನಲ್ಲಿ ಗದ್ದಲ: ವಿರೋಧ ಪಕ್ಷದ ಎಂಟು ಸಂಸದರ ಅಮಾನತು
ನವದೆಹಲಿ: ಲೋಕಸಭೆಯಲ್ಲಿ ಮಂಗಳವಾರ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಹಾಗೂ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನಿರಾಕರಿಸಿದ ವಿಚಾರವಾಗಿ ಪ್ರತಿಭಟನೆ ನಡೆಸಿದ ವಿರೋಧ ಪಕ್ಷದ ಎಂಟು ಸಂಸದರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ. ಅಶಿಸ್ತಿನ ವರ್ತನೆಯ ಆರೋಪದ ಮೇಲೆ ಕಾಂಗ್ರೆಸ್‌ನ ಏಳು ಹಾಗೂ ಸಿಪಿಎಂನ ಒಬ್ಬ ಸಂಸದರನ್ನು ಅಮಾನತುಗೊಳಿಸಿ ಸಭಾಪತಿ ಪೀಠದಲ್ಲಿದ್ದ ದಿಲೀಪ್ ಸೈಕಿಯಾ ಆದೇಶ ಹೊರಡಿಸಿದರು. ಮಾಣಿಕ್ಯಂ ಠಾಗೋರ್, ಹಿಬಿ ಈಡನ್, ಡೀನ್ ಕುರಿಯಾಕೋಸ್, ಅಮರಿಂದರ್ ಸಿಂಗ್ ರಾಜಾ, ಪ್ರಶಾಂತ್ ಪಡೋಲೆ, ಸಿ. ಕಿರಣ್ ಕುಮಾರ್…

