Karnataka
ಮಂಗಳೂರು:ನಗರದ ಬಲ್ಮಠ ಕೆಟಿಸಿ ಕ್ಯಾಂಪಸ್ ಬಿಷಪ್ ಜತ್ತನ್ನ ಸಂಭಾಗಣದಲ್ಲಿ ‘ಜನನುಡಿ’ ಸಮ್ಮೇಳನದ ಯುವಜನ ರಾಜಕಾರಣ ದಿಕ್ಕು-ಭವಿಷ್ಯ-ಸವಾಲು ಘೋಷವಾಕ್ಯದೊಂದಿಗೆ ಪುಸ್ತಕ ಮಳಿಗೆಯನ್ನು ಪ್ರಗತಿಪರ ಚಿಂತಕ ಬಸವರಾಜ ಸೂಳಿಬಾವಿ ಉದ್ಘಾಟಿಸಿ ಮಾತನಾಡಿದರು. “”ಕರ್ನಾಟಕದ ಸಂದಿಗ್ಧ ಕಾಲ ಘಟ್ಟದಲ್ಲಿ ಪುಸ್ತಕ ಮೇಳ ನಡೆಯುತ್ತಿದೆ. ಇವತ್ತು ಪುಸ್ತಕವನ್ನು ಸಂತೆಯನ್ನಾಗಿ ಮಾಡಲಾಗಿದೆ. ಇಂತಹ ವಿದ್ಯಮಾನಗಳ ಹಿಂದೆ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಈ ಪುಸ್ತಕ ಸಂತೆಗೆ ಬಂಡವಾಳ ಹಾಕುವವರು ಯಾರು? ಯಾವ ಕಾರಣಕ್ಕೆ ಬಂಡವಾಳ ಹಾಕುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಂಡರೆ ಅದರ ಸ್ವರೂಪ ಗೊತ್ತಾಗುತ್ತದೆ. ಬಂಡವಾಳಶಾಹಿಗಳ ಅಡಿಯಲ್ಲಿ ಪುಸ್ತಕಗಳನ್ನು ಇರಿಸುವಂತೆ ಮಾಡುತ್ತಿದ್ದಾರೆ. ಬಂಡಾವಳ ಶಾಹಿಗಳ ಅಡಿಯಲ್ಲಿ ಇಡುತ್ತಿದ್ದಾರೆ” ಎಂದರು. “ಈ ಜನನುಡಿ ಆಶಯಗಳನ್ನು ಈಡೇರಿಸುವ, ಎಚ್ಚರಿಸುವ ಕೆಲಸ ಆಗಲಿ” ಎಂದು ಹೇಳಿದರು. ಹಿರಿಯ ಪತ್ರಕರ್ತ ಅನಿಲ್ಹೊ ಹೊಸಮನಿ ಮಾತನಾಡಿ, ವಿಜಯಪುರದಲ್ಲಿ ಬರಗಾಲವಿದೆ. ಅಲ್ಲದೆ ಭೌತಿಕವಾಗಿ ಹಾಗೂ ಬೌದ್ಧಿಕವಾಗಿ ಬರಗಾಲ ಇದೆ. ಕೆಲವು ತಿಂಗಳುಗಳ ಹಿಂದೆ ನಮ್ಮ ವಿಜಯಪುರದಲ್ಲಿ ಮೇ ಸಾಹಿತ್ಯ ಬಳಗದ ವತಿಯಿಂದ ಐದು ದಿನಗಳ ಪುಸ್ತಕ ಮೇಳ ಆಯೋಜಿಸಿದ್ದೆವು ಅದು ತುಂಬಾ…
1 ದಿನಗಳ ಹಿಂದೆ
•
1 ನಿಮಿಷ ಓದು