
ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಅಕ್ಟೋಬರ್ 26ರಂದು ಆಚರಿಸಲಾಗುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ 2026-27ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 10 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗೆ ಆಯ್ಕೆಯಾದವರಿಗೆ ನಗದು ಬಹುಮಾನ ಹಾಗೂ 25 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ.
ಜಲಸಂಪನ್ಮೂಲ ಇಲಾಖೆಯ ಮಾಜಿ ಕಾರ್ಯದರ್ಶಿ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ಜಿ.ಟಿ. ಚಂದ್ರಶೇಖರಪ್ಪ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯು ಸ್ವೀಕೃತವಾದ ಒಟ್ಟು 137 ಅರ್ಜಿಗಳನ್ನು ಪರಿಶೀಲಿಸಿ, ಶೈಕ್ಷಣಿಕ, ಸಾಹಿತ್ಯ, ಸಾಂಸ್ಕೃತಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಾಮಾಜಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಪರಿಶಿಷ್ಟ ಪಂಗಡದ ಜನರ ಏಳಿಗೆಗಾಗಿ ಶ್ರಮಿಸಿದ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸುವುದು ಈ ಪ್ರಶಸ್ತಿಯ ಪ್ರಮುಖ ಉದ್ದೇಶವಾಗಿದೆ.
ಪ್ರಶಸ್ತಿಗೆ ಆಯ್ಕೆಯಾದ ಸಾಧಕರ ಪಟ್ಟಿ
1. ತೇಜಸ್ವಿ ಕಟ್ಟಿಮನಿ
ವಿಳಾಸ: ಅಂಬಿಕೊಪ್ಪ, ಧಾರವಾಡ ಜಿಲ್ಲೆ.
ಕ್ಷೇತ್ರ: ಶೈಕ್ಷಣಿಕ ಕ್ಷೇತ್ರ.
ವಿಭಾಗ: ಬೆಳಗಾವಿ.
2. ತಿಪ್ಪಣ್ಣ ಮರಿಕುಂಟೆ
ವಿಳಾಸ: ಚಳ್ಳಕೆರೆ ತಾಲೂಕು, ಚಿತ್ರದುರ್ಗ ಜಿಲ್ಲೆ.
ಕ್ಷೇತ್ರ: ಸಾಹಿತ್ಯ ಕ್ಷೇತ್ರ.
ವಿಭಾಗ: ಬೆಂಗಳೂರು.
3. ಆರ್.ಎಂ. ಮುನಿರಾಜು
ವಿಳಾಸ: ದೇವನಹಳ್ಳಿ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಕ್ಷೇತ್ರ: ಸಾಂಸ್ಕೃತಿಕ ಸೇವೆ.
ವಿಭಾಗ: ಬೆಂಗಳೂರು.
4. ಡಾ. ಚಂದ್ರನಾಯಕ್ ಎಸ್.
ವಿಳಾಸ: ಸರಸ್ವತಿಪುರಂ, ಮೈಸೂರು ಜಿಲ್ಲೆ.
ಕ್ಷೇತ್ರ: ವಿಜ್ಞಾನ, ತಂತ್ರಜ್ಞಾನ ಮತ್ತು ಶಿಕ್ಷಣ.
ವಿಭಾಗ: ಬೆಂಗಳೂರು ಕೇಂದ್ರ.
5. ಜೆ.ಪಿ. ರಾಜು
ವಿಳಾಸ: ಕುಶಾಲನಗರ ತಾಲೂಕು, ಕೊಡಗು ಜಿಲ್ಲೆ.
ಕ್ಷೇತ್ರ: ಸಾಮಾಜಿಕ ಸೇವೆ.
ವಿಭಾಗ: ಮೈಸೂರು.
6. ಶಿವನಗೌಡ ಹೊನ್ನನಗೌಡ ಪಾಟೀಲ
ವಿಳಾಸ: ಶಿರಹಟ್ಟಿ ತಾಲೂಕು, ಗದಗ ಜಿಲ್ಲೆ.
ಕ್ಷೇತ್ರ: ಸಾಮಾಜಿಕ ಸೇವೆ.
ವಿಭಾಗ: ಬೆಳಗಾವಿ.
7. ನಂದಕುಮಾರ ಮಾಲಿ ಪಾಟೀಲ
ವಿಳಾಸ: ಪಂಚಶೀಲ ನಗರ, ಕಲಬುರಗಿ ಜಿಲ್ಲೆ.
ಕ್ಷೇತ್ರ: ಸಾಮಾಜಿಕ ಸೇವೆ.
ವಿಭಾಗ: ಕಲಬುರಗಿ.
8. ಕೇತಮ್ಮ
ವಿಳಾಸ: ಯಳಂದೂರು ತಾಲೂಕು, ಚಾಮರಾಜನಗರ ಜಿಲ್ಲೆ.
ಕ್ಷೇತ್ರ: ಸಾಮಾಜಿಕ ಸೇವೆ.
ವಿಭಾಗ: ಮೈಸೂರು.
9. ಬಿ.ಜಿ. ಕೃಷ್ಣಪ್ಪ
ವಿಳಾಸ: ಗೋಕುಲ ಬಡಾವಣೆ, ತುಮಕೂರು ಜಿಲ್ಲೆ.
ಕ್ಷೇತ್ರ: ಸಾಮಾಜಿಕ ಸೇವೆ.
ವಿಭಾಗ: ಬೆಂಗಳೂರು.
10. ವೆಂಕಟರಾಮ್
ವಿಳಾಸ: ಮಾಲೂರು ಪಟ್ಟಣ, ಕೋಲಾರ ಜಿಲ್ಲೆ.
ಕ್ಷೇತ್ರ: ಸಾಮಾಜಿಕ ಸೇವೆ.
ವಿಭಾಗ: ಬೆಂಗಳೂರು.
ವಾಲ್ಮೀಕಿ ಜಯಂತಿ: ಜ್ಯೋತಿ ಮೆರವಣಿಗೆ ಮತ್ತು ಪ್ರಶಸ್ತಿ ಪ್ರದಾನ
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಬೆಂಗಳೂರಿನ ಬಸವನಗುಡಿಯ ಶ್ರೀ ಮಹರ್ಷಿ ವಾಲ್ಮೀಕಿ ಮಹಾಸಂಸ್ಥಾನದ ಆದಿಗುರು ಪೀಠದ ಶ್ರೀ ಬೇಡರ ಕಣ್ಣಪ್ಪ ಸ್ವಾಮಿ ದೇವಸ್ಥಾನದಿಂದ ವಾಲ್ಮೀಕಿ ಜ್ಯೋತಿ ಮೆರವಣಿಗೆ ಆರಂಭವಾಗಲಿದೆ. ಶ್ರೀ ಬಸವೇಶ್ವರ ವೃತ್ತದಿಂದ ವಿವಿಧ ಸಾಂಸ್ಕೃತಿಕ ಹಾಗೂ ಬುಡಕಟ್ಟು ಕಲಾತಂಡಗಳ ಪ್ರದರ್ಶನದೊಂದಿಗೆ ಮೆರವಣಿಗೆ ಮುಂದುವರಿಯಲಿದೆ.
ನಂತರ ಶಾಸಕರ ಭವನದ ಮುಂಭಾಗದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ತಪೋವನದಲ್ಲಿನ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಲಾಗುವುದು. ಬಳಿಕ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

