ಜತ್ತದಲ್ಲಿ ಪಂಢರಪುರ ಪಾದಯಾತ್ರಿಕರಿಗೆ ಅದ್ಧೂರಿ ಸ್ವಾಗತ; 14ನೇ ವರ್ಷದ ಯಾತ್ರೆಗೆ ಭಕ್ತರ ಸಂಭ್ರಮದ ಹೆಜ್ಜೆ!

Spread the love

ನವಲಗುಂದ: ಅಳಗವಾಡಿ ಗ್ರಾಮದ ಶ್ರೀ ಹರಿ ಮಂದಿರದ ವತಿಯಿಂದ ಹಮ್ಮಿಕೊಳ್ಳಲಾಗಿರುವ 14ನೇ ವರ್ಷದ ಶ್ರೀ ಕ್ಷೇತ್ರ ಪಂಢರಪುರ ಪಾದಯಾತ್ರೆ ಭಕ್ತಿಭಾವದಿಂದ ಸಾಗುತ್ತಿದ್ದು, ಜತ್ತ ಪಟ್ಟಣ ತಲುಪಿದ ಯಾತ್ರಾರ್ಥಿಗಳಿಗೆ ಅಲ್ಲಿನ ಭಕ್ತರು ಹಾಗೂ ಸಾರ್ವಜನಿಕರು ಅದ್ಧೂರಿಯಾಗಿ ಸ್ವಾಗತ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಿಂಡಿ ಮಾಲೀಕ ರಾಮರೆಡ್ಡಿ ಅಣ್ಣಿಗೇರಿ, “ಕಳೆದ 14 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಈ ಪಾದಯಾತ್ರೆ ಕೇವಲ ಧಾರ್ಮಿಕ ಯಾತ್ರೆಯಾಗಿರದೆ, ಭಕ್ತರ ನಡುವಿನ ಪ್ರೀತಿ, ವಿಶ್ವಾಸ, ಸಾಮರಸ್ಯ ಹಾಗೂ ಪಾಂಡುರಂಗನ ಮೇಲಿನ ಅಚಲ ಭಕ್ತಿಯ ಸಂಕೇತವಾಗಿದೆ” ಎಂದು ಹೇಳಿದರು.

ಪಾಂಡುರಂಗ ವಿಠ್ಠಲನ ದರ್ಶನ ಪಡೆಯುವ ಸಂಕಲ್ಪದೊಂದಿಗೆ ಅಳಗವಾಡಿಯಿಂದ ಆರಂಭಗೊಂಡಿರುವ ಪಾದಯಾತ್ರೆಯು ಹುಣಶಿಕಟ್ಟಿ, ಚಿಕ್ಕನರಗುಂದ, ರಂಕನಕೊಪ್ಪ, ಬಟಕುರ್ಕಿ, ಚಿತ್ರಭಾನ ಕೋಟಿ, ತಿಮ್ಮಾಪೂರ, ಮಾಲಾಪೂರ, ಜಮಖಂಡಿ, ಸಾವಳಗಿ, ಕನ್ನಾಳ ಹಾಗೂ ಉಮರಾಣಿ ಸೇರಿದಂತೆ ವಿವಿಧ ಗ್ರಾಮಗಳ ಮೂಲಕ ಸಾಗಿ ಇದೀಗ ಜತ್ತ ಪಟ್ಟಣ ತಲುಪಿದೆ. ಪಟ್ಟಣದಲ್ಲಿ ಯಾತ್ರಾರ್ಥಿಗಳಿಗೆ ದೊರೆತ ಆತ್ಮೀಯ ಸ್ವಾಗತ ಭಕ್ತರಲ್ಲಿ ಮತ್ತಷ್ಟು ಉತ್ಸಾಹ ಹಾಗೂ ಸಂತಸ ಮೂಡಿಸಿತು.

ಕಳೆದ 14 ವರ್ಷಗಳಿಂದ ಪ್ರತಿವರ್ಷವೂ ಭಕ್ತರು ಉತ್ಸಾಹದಿಂದ ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದು, ವಿಠ್ಠಲನ ನಾಮಸ್ಮರಣೆ, ಭಜನೆ ಹಾಗೂ ಧಾರ್ಮಿಕ ಶ್ರದ್ಧೆಯೊಂದಿಗೆ ಯಾತ್ರೆ ಮುಂದುವರಿಯುತ್ತಿದೆ. ಇದೀಗ ಪಂಢರಪುರ ಕ್ಷೇತ್ರದತ್ತ ಭಕ್ತರು ಹೆಜ್ಜೆ ಹಾಕುತ್ತಿದ್ದು, ವಿಠ್ಠಲನ ದರ್ಶನದ ನಿರೀಕ್ಷೆಯೊಂದಿಗೆ ಪಾದಯಾತ್ರೆ ಸಾಗುತ್ತಿದೆ.

Leave a Reply

Your email address will not be published. Required fields are marked *