ಶುಕ್ರವಾರ, 27 Nov 2026 | ಕರ್ನಾಟಕ & ರಾಷ್ಟ್ರೀಯ ಸುದ್ದಿ ಪೋರ್ಟಲ್
ಶುಕ್ರವಾರ, 27 Nov 2026 ವಿಶ್ವಾಸಾರ್ಹ ಕನ್ನಡ & ರಾಷ್ಟ್ರೀಯ ಸುದ್ದಿ ಜಾಲ
Karnataka

ಹನೂರು: ವಿದ್ಯಾಸಂಸ್ಥೆಗಳಲ್ಲಿ ಸಂವಿಧಾನ ದಿನ ಆಚರಣೆ

30-ಸೆಕೆಂಡ್ ಮುಖ್ಯಾಂಶಗಳು (30-Sec AI Summary)
  • ಪ್ರಮುಖ ಬೆಳವಣಿಗೆ: ಹನೂರು: ವಿದ್ಯಾಸಂಸ್ಥೆಗಳಲ್ಲಿ ಸಂವಿಧಾನ ದಿನ ಆಚರಣೆ
  • Spread the loveಹನೂರು: ಸಂವಿಧಾನ ದಿನಾಚರಣೆಯನ್ನು ಪಟ್ಟಣದ ವಿದ್ಯಾಸಂಸ್ಥೆಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂವಿಧಾನ ಕೇವಲ ಪುಸ್ತಕವಲ್ಲ, ಅದು ಪ್ರತಿಯೊಬ್ಬ ಭಾರತೀಯನ ಬದುಕಿಗೆ ದಾರಿದೀಪ. ಅದನ್ನು ಓದುವುದು ಮಾತ್ರವಲ್ಲ,…
  • ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮತ್ತು ಸ್ಥಳೀಯ ಮೂಲಗಳಿಂದ ಸಮಗ್ರ ವರದಿ ಪರಿಶೀಲನೆ.
ಸುದ್ದಿ ಆಲಿಸಿ • ಸಿದ್ಧವಾಗಿದೆ (Ready)
AI ಆಡಿಯೋ ನ್ಯೂಸ್‌ರೂಮ್ • ಕನ್ನಡ & English
ವೇಗ:
Spread the love

ಹನೂರು: ಸಂವಿಧಾನ ದಿನಾಚರಣೆಯನ್ನು ಪಟ್ಟಣದ ವಿದ್ಯಾಸಂಸ್ಥೆಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂವಿಧಾನ ಕೇವಲ ಪುಸ್ತಕವಲ್ಲ, ಅದು ಪ್ರತಿಯೊಬ್ಬ ಭಾರತೀಯನ ಬದುಕಿಗೆ ದಾರಿದೀಪ. ಅದನ್ನು ಓದುವುದು ಮಾತ್ರವಲ್ಲ, ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಗೌರವ ಎಂಬ ಸಂದೇಶ ಕಾರ್ಯಕ್ರಮದಲ್ಲಿ ಮೊಳಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಸ್ತರಾಜ ಸಂಸ್ಥೆಗಳ ವ್ಯವಸ್ಥಾಪಕ ವಂದನೀಯ ಗುರು ಸಂಜಯ್ ಕುಮಾರ್ ಮಾತನಾಡಿ, ಎಲ್ಲಾ ಧರ್ಮಗಳಿಗೂ ಪವಿತ್ರ ಗ್ರಂಥಗಳಿರುವಂತೆ ಭಾರತೀಯರಿಗೆ ಸಂವಿಧಾನವು ಅಮೂಲ್ಯ ಗ್ರಂಥವಾಗಿದೆ. ವಿದ್ಯಾರ್ಥಿಗಳು ಸಂವಿಧಾನವನ್ನು ಗೌರವಿಸಬೇಕು, ಸಂವಿಧಾನ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಶೀಲಾ ಮೇರಿ, ಮುಖ್ಯಶಿಕ್ಷಕರಾದ ಸುಬ್ರಮಣ್ಯ, ಶ್ರೀಮತಿ ಪುಷ್ಪ ಸಗಾಯ, ಸಿಸ್ಟರ್ ಜೆಸಿಂತಾ ಹಾಗೂ ಉಪನ್ಯಾಸಕರು, ಶಿಕ್ಷಕ-ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ADVERTISEMENT