ಶುಕ್ರವಾರ, 27 Nov 2026 | ಕರ್ನಾಟಕ & ರಾಷ್ಟ್ರೀಯ ಸುದ್ದಿ ಪೋರ್ಟಲ್
ಶುಕ್ರವಾರ, 27 Nov 2026 ವಿಶ್ವಾಸಾರ್ಹ ಕನ್ನಡ & ರಾಷ್ಟ್ರೀಯ ಸುದ್ದಿ ಜಾಲ
Karnataka

ವಿಶೇಷಚೇತನರ ಸಬಲೀಕರಣವೇ ಮುಖ್ಯ: ರಾಜ್ಯ ಆಯುಕ್ತ ಡಾ. ವೆಂಕಟರಮಣಸ್ವಾಮಿ

30-ಸೆಕೆಂಡ್ ಮುಖ್ಯಾಂಶಗಳು (30-Sec AI Summary)
  • ಪ್ರಮುಖ ಬೆಳವಣಿಗೆ: ವಿಶೇಷಚೇತನರ ಸಬಲೀಕರಣವೇ ಮುಖ್ಯ: ರಾಜ್ಯ ಆಯುಕ್ತ ಡಾ. ವೆಂಕಟರಮಣಸ್ವಾಮಿ
  • Spread the loveಚಾಮರಾಜನಗರ: ವಿಶೇಷಚೇತನರ ಬಗ್ಗೆ ಕರುಣೆ ಬೇಡ, ಅವರು ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕು ರೂಪಿಸಿಕೊಳ್ಳಲು ಅವಕಾಶ ಕಲ್ಪಿಸುವುದು ಎಲ್ಲರ ಕರ್ತವ್ಯವಾಗಿದೆ. ವಿಶೇಷಚೇತನರ ಸಬಲೀಕರಣ ಮತ್ತು ಅವರ…
  • ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮತ್ತು ಸ್ಥಳೀಯ ಮೂಲಗಳಿಂದ ಸಮಗ್ರ ವರದಿ ಪರಿಶೀಲನೆ.
ಸುದ್ದಿ ಆಲಿಸಿ • ಸಿದ್ಧವಾಗಿದೆ (Ready)
AI ಆಡಿಯೋ ನ್ಯೂಸ್‌ರೂಮ್ • ಕನ್ನಡ & English
ವೇಗ:
Spread the love

ಚಾಮರಾಜನಗರ: ವಿಶೇಷಚೇತನರ ಬಗ್ಗೆ ಕರುಣೆ ಬೇಡ, ಅವರು ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕು ರೂಪಿಸಿಕೊಳ್ಳಲು ಅವಕಾಶ ಕಲ್ಪಿಸುವುದು ಎಲ್ಲರ ಕರ್ತವ್ಯವಾಗಿದೆ. ವಿಶೇಷಚೇತನರ ಸಬಲೀಕರಣ ಮತ್ತು ಅವರ ದಿನನಿತ್ಯದ ಬದುಕನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ʼಮಾರ್ಗದರ್ಶಿʼ ಸಂಸ್ಥೆ ಶ್ರಮಿಸುತ್ತಿದೆ ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಆಯುಕ್ತ ಡಾ. ವೆಂಕಟರಮಣಸ್ವಾಮಿ ಎಸ್.ವಿ. ತಿಳಿಸಿದರು.

ನಗರದ ಫಾರೆಸ್ಟ್ ನರ್ಸರಿ ರಸ್ತೆಯಲ್ಲಿರುವ ಮಾರ್ಗದರ್ಶಿ ಸಂಸ್ಥೆ ಕಚೇರಿಯ ಆವರಣದಲ್ಲಿ ಮಾರ್ಗದರ್ಶಿ ವಿಕಲಚೇತನರ ಸ್ವಯಂಸೇವಾ ಸಂಸ್ಥೆ ಬೆಂಗಳೂರು ಹಾಗೂ ಸಮುದಾಯ ಆಧಾರಿತ ಪುನರ್ವಸತಿ ಯೋಜನೆ ಚಾಮರಾಜನಗರ ಇವರ ಸಹಯೋಗದಲ್ಲಿ ವಿಕಲಚೇತನ ಮಕ್ಕಳಿಗೆ ಸಾಧನ ಸಲಕರಣೆ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಕಲಚೇತನರು ಸಮಾಜದ ಮುಖ್ಯವಾಹಿನಿಗೆ ಬರಲು ಇಂತಹ ಪೂರಕ ಸಲಕರಣೆಗಳು ಮತ್ತು ಸಂಸ್ಥೆಗಳ ಪ್ರೋತ್ಸಾಹ ಅಗತ್ಯ. ಮಾರ್ಗದರ್ಶಿ ಸಂಸ್ಥೆಯ ಈ ಸಾಮಾಜಿಕ ಕಳಕಳಿ ಇತರರಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾರ್ಗದರ್ಶಿ ಸಂಸ್ಥೆಯ ಉಪಾಧ್ಯಕ್ಷೆ ಕೆ.ಎಂ. ಗೀತಾಮೃತ ಮಾತನಾಡಿ, ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ವಿಕಲಚೇತನರ ಶಿಕ್ಷಣ, ಆರೋಗ್ಯ ಮತ್ತು ಸ್ವಾವಲಂಬಿ ಬದುಕಿಗಾಗಿ ಶ್ರಮಿಸುತ್ತಿದ್ದು, ಅರ್ಹ ಫಲಾನುಭವಿಗಳನ್ನು ಗುರುತಿಸಿ ಈ ಸವಲತ್ತುಗಳನ್ನು ನೀಡಲಾಗುತ್ತಿದೆ. ವಿಕಲಚೇತನ ಹೆಣ್ಣು ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಸಂಸ್ಥೆಯು ದಾಪುಗಾಲು ಹಾಕಿದೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಸುಭದ್ರದೇವಿ ಮಾತನಾಡಿ, ಸರ್ಕಾರದಿಂದ ವಿಕಲಚೇತನರಿಗೆ ಹಲವಾರು ಸೌಲಭ್ಯಗಳಿವೆ. ಕೆಲವು ಖಾಸಗಿ ಸಂಸ್ಥೆಗಳು ಅಂಗವಿಕಲರ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಿವೆ. ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ನೀಡುವ ಉಪಯೋಗಗಳನ್ನು ಪಡೆದುಕೊಳ್ಳಿ ಎಂದು ತಿಳಿಸಿದರು.

ಮಾರ್ಗದರ್ಶಿ ನಿರ್ದೇಶಕರು, ಮಾಜಿ ಆಯುಕ್ತರಾದ ಕೆ.ವಿ. ರಾಜಣ್ಣ ಮಾತನಾಡಿ, ವಿಕಲಚೇತನರ ಆರೋಗ್ಯವನ್ನು ಕಾಪಾಡುವಲ್ಲಿ ತಾಯಂದಿರ ಪಾತ್ರ ಬಹಳ ದೊಡ್ಡದು. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಧೈರ್ಯ ತುಂಬಬೇಕು. ನಮ್ಮ ಸಂಸ್ಥೆಯ ವತಿಯಿಂದ ಗಾಲಿಕುರ್ಚಿಗಳು, ಶ್ರವಣ ಸಾಧನಗಳು, ಕೃತಕ ಕಾಲುಗಳು ಮತ್ತು ಊರುಗೋಲುಗಳು ಹಾಗೂ ಬಡ ವಿಕಲಚೇತನ ಕುಟುಂಬಗಳಿಗೆ ಹಸು ಮತ್ತು ಕರು ದಾನದ ರೂಪದಲ್ಲಿ ಕೊಡಿಸುವ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದು ಬಂದಿವೆ ಎಂದರು.

ವಿಶೇಷಚೇತನರ ಸಬಲೀಕರಣವೇ ಮುಖ್ಯ: ರಾಜ್ಯ ಆಯುಕ್ತ ಡಾ. ವೆಂಕಟರಮಣಸ್ವಾಮಿ

ಕಾರ್ಯಕ್ರಮದಲ್ಲಿ ಕಾರ್ಯಕ್ರಮ ವ್ಯವಸ್ಥಾಪಕ ಅಭಿಷೇಕ್ ಎ.ಸಿ., ಶ್ರೀನಿವಾಸ್, ಫಿಜಿಯೋಥೆರಪಿಸ್ಟ್ ರಾಜು, ಪೂಜಾ, ಮಹದೇವಸ್ವಾಮಿ, ಜ್ಯೋತಿ, ಶಿವರಾಜಮ್ಮ, ಹಂಸವೇಣಿ, ಗೌತಮ್ ಹಾಗೂ ಮಾರ್ಗದರ್ಶಿ ಸಿಬ್ಬಂದಿ ಉಪಸ್ಥಿತರಿದ್ದರು.

ಚಾಮರಾಜನಗರ ಜಿಲ್ಲೆಯ 52ಕ್ಕೂ ಹೆಚ್ಚಿನ ವಿಕಲಚೇತನ ಮಕ್ಕಳಿಗೆ ಅವರ ಅಳತೆಗೆ ತಕ್ಕಂತೆ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.

ADVERTISEMENT