ಗಣೇಶ ಹಬ್ಬದ ಆಚರಣೆಯ ಮೂಲಕ, ನಾಡಿನ ಜನತೆಗೆ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ನೀಡಲಿ: ಶಾಸಕ ಎಂ ಆರ್ ಪಾಟೀಲ
ಹುಬ್ಬಳ್ಳಿ: ಕುಂದಗೋಳ ಮತಕ್ಷೇತ್ರದ ಶಾಸಕರಾದ ಎಂ.ಆರ್.ಪಾಟೀಲ ಅವರು ಗಣೇಶ ಚತುರ್ಥಿಯ ಪವಿತ್ರ ಸಂದರ್ಭದಲ್ಲಿ ತಮ್ಮ ಹುಬ್ಬಳ್ಳಿಯ ನಿವಾಸದಲ್ಲಿ ಕುಟುಂಬದೊಂದಿಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಸಲ್ಲಿಸಿದರು. ಸಾಂಪ್ರದಾಯಿಕ ಶ್ರದ್ಧೆ ಮತ್ತು ಭಕ್ತಿಯಿಂದ ನಡೆದ ಈ ಪೂಜಾ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಅವರ ಕುಟುಂಬದವರು ಸಡಗರದಿಂದ ಭಾಗವಹಿಸಿದ್ದರು. ಸರಳತೆ ಮತ್ತು ಸಂಪ್ರದಾಯಗಳಿಗೆ ಒತ್ತುಪೂಜೆಯ ನಂತರ, ಶಾಸಕ ಎಂ.ಆರ್.ಪಾಟೀಲ ಅವರು, “ಶುಕ್ಲಾಂಬರದರಂ ವಿಷ್ಣುಂ, ಶಶಿವರ್ಣಂ ಚತುರ್ಭುಜಂ | ಪ್ರಸನ್ನ ವದನಂ ಧ್ಯಾಯೇತ್, ಸರ್ವ ವಿಘೋಪ ಶಾಂತಯೇ ||” ಎಂಬ…
