ಯುವ ಕಲಾವಿದ ಬಸವರಾಜ ತಳವಾರಗೆ ‘ಚಿತ್ತಾರ ಚೇತನ’ ಪ್ರಶಸ್ತಿ
ಧಾರವಾಡ: ಕಲಾವಿದ ಶ್ರೀ ಬಿ. ಮಾರುತಿ ದತ್ತಿ ಅಂಗವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘವು, ‘ಚಿತ್ತಾರ ಚೇತನ’ ಪ್ರಶಸ್ತಿ ಪ್ರದಾನ ಹಾಗೂ ಮೂರು ದಿನಗಳ ಚಿತ್ರಕಲಾ ಪ್ರದರ್ಶನವನ್ನು ಸೆಪ್ಟೆಂಬರ್ ೧೩ರಂದು ಸಂಜೆ ೬ ಗಂಟೆಗೆ ಸಂಘದ ಚಿತ್ರಕಲಾ ಪ್ರದರ್ಶನ ಸಭಾಭವನದಲ್ಲಿ ಹಮ್ಮಿಕೊಂಡಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ವಿ.ವ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ವಹಿಸುವರು. ತುಮಕೂರಿನ ಹಿರಿಯ ಕಲಾವಿದಪ್ರಭು ಹರಸೂರು ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯ ಅತಿಥಿಗಳಾಗಿ ಧಾರವಾಡ ಆಕಾಶವಾಣಿ ನಿವೃತ್ತ ನಿರ್ದೇಶಕ ಸಿ. ಯು. ಬೆಳ್ಳಕ್ಕಿ ಹಾಗೂ ಮೈಸೂರಿನ ಹಿರಿಯ…

