ಕುಂದಗೋಳದ ‘ಸಂಗೀತ ಕಾಶಿ’ಯಲ್ಲಿ ದಿ. ಸವಾಯಿ ಗಂಧರ್ವರ 73ನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಸಂಗೀತೋತ್ಸವದ ವೈಭವ

ಕುಂದಗೋಳ: ‘ಸಂಗೀತ ಕಾಶಿ’ ಎಂದೇ ಖ್ಯಾತಿ ಪಡೆದಿರುವ ಕುಂದಗೋಳದಲ್ಲಿ, ದಿ. ಸವಾಯಿ ಗಂಧರ್ವರ 73ನೇ ಪುಣ್ಯತಿಥಿಯ ನಿಮಿತ್ತ ಆಯೋಜಿಸಲಾದ ಅಹೋರಾತ್ರಿ ಸಂಗೀತ ಮಹೋತ್ಸವವು ವೈಭವಯುತವಾಗಿ ಆರಂಭಗೊಂಡಿತು. ಪಟ್ಟಣದ ದಿ:ಸವಾಯಿ ಗಂಧರ್ವರ ಸ್ಮಾರಕ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಿ. ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮಕ್ಕೆ ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳು ಚಾಲನೆ ನೀಡಿ, ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸ್ವಾಮೀಜಿಗಳು ತಮ್ಮ ವಿಶಿಷ್ಟ…

Read More

ಶಿಕ್ಷಣ, ಯುವಕರ ಜಾಗೃತಿಯೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿ: ಸಚಿವ ಸಂತೋಷ ಲಾಡ್

ಧಾರವಾಡ: ಪ್ರಜೆಗಳೇ ಪ್ರಜಾಪ್ರಭುತ್ವದ ಜೀವಾಳವಾಗಿದ್ದು, ಯುವ ಸಮುದಾಯ ಜಾಗೃತವಾದರೆ ಮಾತ್ರ ಪ್ರಜಾಪ್ರಭುತ್ವ ಸದೃಢವಾಗಿ ಉಳಿಯಲು ಸಾಧ್ಯ ಎಂದು ಕಾರ್ಮಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಅಭಿಪ್ರಾಯಪಟ್ಟಿದ್ದಾರೆ. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಧಾರವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೂಲ ಆಶಯ ಸಮಾಜದ ಎಲ್ಲ ವರ್ಗದ ಜನರಿಗೆ ಸಮಾನತೆ ಒದಗಿಸುವುದು ಎಂದು ತಿಳಿಸಿದರು. ಮೀಸಲಾತಿಯು ಸಮಾನತೆಯ ಸಾಧನಸಮಾಜದ ಎಲ್ಲರಿಗೂ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮಾನತೆ ಮತ್ತು…

Read More

ಹೆಚ್ಚುತ್ತಿರುವ ಜನಸಂಖ್ಯೆ, ಕುಸಿಯುತ್ತಿರುವ ಆಹಾರ ಉತ್ಪಾದನೆ; ಕೃಷಿ ವಿವಿಗಳು ಪರಿಹಾರ ಹುಡುಕಲಿ: ಸಿಎಂ ಸಿದ್ದರಾಮಯ್ಯ

ಧಾರವಾಡ ಕೃಷಿ ಮೇಳಕ್ಕೆ ಸಿಎಂ ಚಾಲನೆ: ಕೃಷಿ ವಿವಿಗಳು ‘ಲ್ಯಾಂಡ್ ಟು ಲ್ಯಾಬ್’ ಮಾದರಿ ಅನುಸರಿಸಲಿ ಧಾರವಾಡ: ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆ ಆಗುತ್ತಿಲ್ಲ. ಹಸಿರು ಕ್ರಾಂತಿಯ ವೇಗ ಈಗ ಕುಂಠಿತಗೊಂಡಿದ್ದು, ಈ ಬಗ್ಗೆ ಕೃಷಿ ವಿಶ್ವವಿದ್ಯಾಲಯಗಳು ಗಂಭೀರ ಅಧ್ಯಯನ ನಡೆಸಿ, ರೈತಸ್ನೇಹಿ ಪರಿಹಾರಗಳನ್ನು ಕಂಡುಕೊಳ್ಳಬೇಕು. ವಿವಿಗಳು ಕೇವಲ ‘ಲ್ಯಾಬ್ ಟು ಲ್ಯಾಂಡ್’ಗೆ ಸೀಮಿತವಾಗದೆ, ‘ಲ್ಯಾಂಡ್ ಟು ಲ್ಯಾಬ್’ (ರೈತರ ಹೊಲದಿಂದ ಪ್ರಯೋಗಾಲಯಕ್ಕೆ) ಕಡೆಗೆ ಹೆಚ್ಚು ಗಮನಹರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು….

Read More

ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ ಪ್ರಧಾನ ಸಮಾರಂಭ ಸೆ:26 ರಂದು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು, ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ ದತ್ತಿ ಅಂಗವಾಗಿ ಸೆಪ್ಟೆಂಬರ್ 26, ರಂದು ಸಂಜೆ ೬ ಗಂಟೆಗೆ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ‘ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ-2025’ ಪ್ರಧಾನ ಸಮಾರಂಭವನ್ನು ಆಯೋಜಿಸಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರವಾಡದ ಸೋನಿಯಾ ಎಜ್ಯುಕೇಶನ್ ಟ್ರಸ್ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಹನುಮಂತ ಡಂಬಳ ಅವರು ವಹಿಸಲಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹುಬ್ಬಳ್ಳಿ-ಧಾರವಾಡ…

Read More

ಧಾರವಾಡ: ಕಲೆ ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುವ ಮಾಧ್ಯಮ: ಪ್ರಭು ಹರಸೂರ

ಧಾರವಾಡ: ಕಲೆ ಮಾನವನ ಮನಸ್ಸಿಗೆ ಉಲ್ಲಾಸ ಹಾಗೂ ನೆಮ್ಮದಿ ನೀಡುವ ಶಕ್ತಿಯುಳ್ಳ ಮಾಧ್ಯಮ. ಚಿತ್ರಕಲೆಯಲ್ಲಿ ಸೌಂದರ್ಯಾನುಭೂತಿ ಮೂಡಿಸುವ ವಿಶೇಷ ಶಕ್ತಿ ಇದೆ ಎಂದು ಹಿರಿಯ ಚಿತ್ರಕಲಾವಿದ ಪ್ರಭು ಹರಸೂರ ಅಭಿಪ್ರಾಯಪಟ್ಟರು. ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ಬಿ. ಮಾರುತ್ತಿ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಚಿತ್ತಾರ ಚೇತನ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಸಂಗೀತ, ಸಾಹಿತ್ಯ, ಚಿತ್ರಕಲೆಯಂತಹ ಯಾವುದೇ ಕ್ಷೇತ್ರವಿರಲಿ, ಅಲ್ಲಿ ನಂಬಿಕೆ, ವಿಶ್ವಾಸ ಹಾಗೂ ಬದ್ಧತೆ ಅತ್ಯಂತ ಮುಖ್ಯ. ಕಲೆಯನ್ನು…

Read More

ಚಿನ್ನಾಭರಣ, ನಗದು ಕಳ್ಳತನ ಪ್ರಕರಣ: ಇಬ್ಬರು ಖದೀಮರ ಬಂಧನ, ಪೊಲೀಸರಿಗೆ ಸಾರ್ವಜನಿಕರ ಮೆಚ್ಚುಗೆ

ನವಲಗುಂದ: ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಚಿನ್ನಾಭರಣ ಹಾಗೂ ನಗದು ಕಳವು ಮಾಡುತ್ತಿದ್ದ ಇಬ್ಬರು ಕುಖ್ಯಾತ ಆರೋಪಿಗಳನ್ನು ನವಲಗುಂದ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹5.20 ಲಕ್ಷ ಮೌಲ್ಯದ 65 ಗ್ರಾಂ ಚಿನ್ನಾಭರಣ ಮತ್ತು ₹50 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಸಿಪಿಐ ರವಿಕುಮಾರ ಕಪ್ಪತ್ತನವರ ತಿಳಿಸಿದ್ದಾರೆ. ತನಿಖಾ ಕಾರ್ಯಾಚರಣೆ ಮತ್ತು ಹಿನ್ನೆಲೆಮಾರ್ಚ್ 4, 2025 ರಂದು ಗದಗ ಜಿಲ್ಲೆಯ ರೋಣ ತಾಲೂಕಿನ ಕೌಜಗೇರಿ ಗ್ರಾಮದ ಮಹಿಳೆಯೊಬ್ಬರು ತಮ್ಮ ಆಭರಣ ಕಳವಾಗಿರುವ ಬಗ್ಗೆ ದೂರು ನೀಡಿದ್ದರು. ದೂರಿನ ಆಧಾರದ…

Read More

ಸಾರ್ವಜನಿಕ ಸೇವೆಗೆ ಸದಾ ಬದ್ಧ: ಸಚಿವ ಸಂತೋಷ ಲಾಡ್

ಕಲಘಟಗಿ: ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಕಲಘಟಗಿ ಪಟ್ಟಣದ ಹೊರವಲಯದ ಮಡಕಿಹೊನ್ನಳ್ಳಿ ಅಮೃತ ನಿವಾಸದಲ್ಲಿ ಇತ್ತಿಚ್ಚಿಗೆ ಹಮ್ಮಿಕೊಂಡಿದ್ದ ಉಚಿತ ಶ್ರವಣದೋಷ ಚಿಕಿತ್ಸಾ ಶಿಬಿರದಲ್ಲಿ ಫಲಾನುಭವಿಗಳಿಗೆ ಶ್ರವಣ ಸಾಧಕಗಳನ್ನು ವಿತರಿಸಿದ ಸಚಿವ ಸಂತೋಷ ಲಾಡ್ ಅವರು, ಸಾರ್ವಜನಿಕ ಸೇವೆಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.“ನಾನು ನಿಮ್ಮಂತ ಸಣ್ಣ ಕುಟುಂಬದಲ್ಲಿ ಬೆಳೆದಿದ್ದೇನೆ. ಬಡವರ ಕಷ್ಟ, ನೋವುಗಳ ಅರಿವು ನನಗಿದೆ. ಕಾರ್ಮಿಕ ಸಚಿವನಾಗಿ ರಾಜ್ಯಾದ್ಯಂತ ಪ್ರವಾಸ ಮಾಡಬೇಕಾದ ಕಾರಣ ಕ್ಷೇತ್ರಕ್ಕೆ ಹೆಚ್ಚು ಭೇಟಿ ನೀಡಲು ಆಗಿಲ್ಲ. ಆದರೂ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ…

Read More

ಕುಂದಗೋಳ ಮತಕ್ಷೇತ್ರದಲ್ಲಿ ಶಾಸಕ ಎಂ.ಆರ್.ಪಾಟೀಲ್ ಅವರಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ

ಕುಂದಗೋಳ: ರವಿವಾರದಂದು ಕುಂದಗೋಳ ಮತಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಶಾಸಕ ಎಂ.ಆರ್. ಪಾಟೀಲ್ ಅವರು ಹೊಸ ಕಾಮಗಾರಿಗಳ ಆರಂಭ ಮತ್ತು ನೂತನ ಕಟ್ಟಡಗಳ ಉದ್ಘಾಟನೆಯಲ್ಲಿ ಭಾಗವಹಿಸಿ, ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದರು. ಶಾಲಾ ಕೊಠಡಿಗಳ ಉದ್ಘಾಟನೆ ಮತ್ತು ರಸ್ತೆ ಕಾಮಗಾರಿಗೆ ಚಾಲನೆರಾಯನಾಳ ಗ್ರಾಮದ ಕಲಗನಮಡ್ಡಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ NTPC CSR ಯೋಜನೆಯಡಿ ನಿರ್ಮಿಸಲಾದ 31.40 ಲಕ್ಷ ರೂಪಾಯಿ ವೆಚ್ಚದ ಎರಡು ಹೊಸ ಶಾಲಾ ಕೊಠಡಿಗಳನ್ನು ಉದ್ಘಾಟಿಸಲಾಯಿತು. ಇದರ…

Read More

ಧಾರವಾಡ | ಕಾಮಗಾರಿ, ಕಾರ್ಯಕ್ರಮಗಳಲ್ಲಿ ಪಾರದರ್ಶಕತೆ, ಗುಣಮಟ್ಟ ಕಾಪಾಡಿ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಧಾರವಾಡ:ಕೇಂದ್ರ ಸರ್ಕಾರವು ವಿವಿಧ ಮಂತ್ರಾಲಯಗಳ ಅಡಿಯಲ್ಲಿ ರಾಜ್ಯದ ಅಭಿವೃದ್ಧಿಗಾಗಿ ವಿವಿಧ ಕಾಮಗಾರಿ ಮತ್ತು ಕಾರ್ಯಕ್ರಮಗಳ ಸಮಪರ್ಕ ಅನುಷ್ಠಾನಕ್ಕಾಗಿ ಅನುದಾನ ಬಿಡುಗಡೆ ಮಾಡುತ್ತದೆ. ಇದರಲ್ಲಿ ಪಾರದರ್ಶಕತೆ ಮತ್ತು ಗುಣಮಟ್ಟವನ್ನು ಕಾಪಾಡಬೇಕು. ಅನುದಾನ ಸದ್ಬಳಕೆಯಾಗಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ-ದಿಶಾ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಾ, ಕೇಂದ್ರ ಪುರಸ್ಕೃತ ಯೋಜನೆಗಳಡಿ ನಿರ್ಮಾಣವಾಗಿರುವ ಕಾಮಗಾರಿ, ಕಟ್ಟಡಗಳನ್ನು ಉದ್ಘಾಟಿಸುವಾಗ ಕಡ್ಡಾಯವಾಗಿ ತಮಗೆ ಮಾಹಿತಿ…

Read More

ಧಾರವಾಡ ಕೃಷಿ ಮೇಳ: ಎರಡನೇ ದಿನ 7.74 ಲಕ್ಷ ಜನ ಭೇಟಿ, ಇಂದು ಸಿಎಂ ಸಿದ್ದರಾಮಯ್ಯ ಭೇಟಿ(ನಿರೀಕ್ಷೆ)

ಧಾರವಾಡ: ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ದಿನದಿಂದ ದಿನಕ್ಕೆ ಜನಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಎರಡನೇ ದಿನವಾದ ಭಾನುವಾರ ದಾಖಲೆ ಸಂಖ್ಯೆಯ ಜನ ಮೇಳಕ್ಕೆ ಭೇಟಿ ನೀಡಿರುವುದು ಕಂಡುಬಂದಿದೆ. ಮೊದಲ ದಿನ 3.65 ಲಕ್ಷ ಜನ ಬಂದಿದ್ದರೆ, ಎರಡನೇ ದಿನ ಭಾನುವಾರ ಬರೋಬ್ಬರಿ 7.74 ಲಕ್ಷ ಜನ ಭೇಟಿ ನೀಡುವ ಮೂಲಕ ಭರ್ಜರಿ ಸ್ಪಂದನೆ ದೊರಕಿದೆ. ಕಳೆದ ವರ್ಷದ ಎರಡನೇ ದಿನ 7.28 ಲಕ್ಷ ಜನ ಭೇಟಿ ನೀಡಿದ್ದರು, ಆದರೆ ಈ ಬಾರಿ ಆ ದಾಖಲೆಯನ್ನು ಸರಿಗಟ್ಟಲಾಗಿದೆ….

Read More