ಸಾಲಬಾಧೆ ತಾಳಲಾರದೆ ತರ್ಲಘಟ್ಟ ಗ್ರಾಮದ ರೈತ ಆತ್ಮಹತ್ಯೆ
ಕುಂದಗೋಳ: ಅತಿಯಾದ ಮಳೆ ಮತ್ತು ಸಾಲಬಾಧೆ ತಾಳಲಾರದೆ ತಾಲೂಕಿನ ತರ್ಲಘಟ್ಟ ಗ್ರಾಮದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಮೃತರನ್ನು ರುದ್ರಗೌಡ ಹುತ್ತನಗೌಡ ರಾಮನಗೌಡ್ರ (50) ಎಂದು ಗುರುತಿಸಲಾಗಿದೆ. ಮೃತ ರೈತರು ತರ್ಲಘಟ್ಟ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಕೆರೆಗೆ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಈ ಗ್ರಾಮದಲ್ಲಿ ಜರುಗಿದೆ. ಜಮೀನಿನಲ್ಲಿ ಬೆಳೆದಿದ್ದ ಬೆಳೆ ನಾಶರುದ್ರಗೌಡ ರಾಮನಗೌಡ್ರ (50) ಅವರು ಹೊಂದಿದ್ದು, ಈ ವರ್ಷ ಅತೀವೃಷ್ಟಿ ಮಳೆಯಿಂದಾಗಿ ಗೋವಿನ ಜೋಳದ ಬೆಳೆ ಸಂಪೂರ್ಣವಾಗಿ ನಾಶವಾಗಿತ್ತು….

