ನವಲಗುಂದ: ಗಂಗೇ ಬಸವಣ್ಣ ರಥೋತ್ಸವ ಭಕ್ತಸಮೂಹದಲ್ಲಿ ದೀಪಾವಳಿ ಪಾಡ್ಯದಿನ ಉತ್ಸವ
ನವಲಗುಂದ: ಪಟ್ಟಣದ ದೇಸಾಯಿ ಪೇಟೆಯ ಶ್ರೀ ಗಂಗೇ ಬಸವೇಶ್ವರ ದೇವಸ್ಥಾನದ ಗಂಗೇ ಬಸವಣ್ಣ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ದೀಪಾವಳಿ ಪಾಡ್ಯದಿನವಾದ ಬುಧವಾರ ದಿವಸ ವಿಜೃಂಭಣೆಯಿಂದ ಜರುಗಿತು. ಸಕಲ ವಾದ್ಯಮೇಳದೊಂದಿಗೆ ಗಂಗೇ ಬಸವಣ್ಣ ರಥೋತ್ಸವ ದೇವಸ್ಥಾನದಿಂದ ಪ್ರಾರಂಭವಾದಂತೆ ಭಕ್ತರು ಹರ್-ಹರ್ ಮಹಾದೇವ ಜಯ ಘೋಷಗಳನ್ನು ಹಾಕಿದರು. ಡೊಳ್ಳು-ಕರಡಿ ಮಜಲು ಸದಸ್ಯರಿಂದ ಭಜನೆ ನಡೆಯಿತು, ಮಹಿಳೆಯರು ಆರತಿ ಹಿಡಿದು ನಡೆದರು, ಅಲಂಕೃತ ಭವ್ಯ ರಥಕ್ಕೆ ಉತ್ತತ್ತಿ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ರಥೋತ್ಸವ ಗಣಪತಿ ದೇವಸ್ಥಾನ ತಲುಪಿ ಅಲ್ಲಿ…

