ಕನ್ನಡದ ಏಕೀಕರಣಕ್ಕೆ ಶ್ರಮಿಸಿದ ಪಂ. ಚಂದ್ರಶೇಖರ ಶಾಸ್ತ್ರೀ: ಡಾ. ಜಿನದತ್ತ ಹಡಗಲಿ

ಧಾರವಾಡ: ಪಂ. ಚಂದ್ರಶೇಖರ ಶಾಸ್ತ್ರೀಗಳು ಸಂಸ್ಕೃತದ ಪ್ರಕಾಂಡ ಪಂಡಿತರಾಗಿದ್ದರೂ, ಕನ್ನಡ ನಾಡು-ನುಡಿಯು ಅವರ ಜೀವನದ ಉಸಿರಾಗಿತ್ತು. ಕನ್ನಡದ ಕೀರ್ತಿಯನ್ನು ಆಕಾಶದೆತ್ತರಕ್ಕೆ ಹಾರಿಸಿದ ಅವರನ್ನು ‘ವ್ಯಾಕರಣತೀರ್ಥ’ ಮತ್ತು ‘ವಿದ್ಯಾವಾರಿಧಿ’ ಎಂಬ ಬಿರುದುಗಳಿಂದ ಗೌರವಿಸಲಾಗಿತ್ತು ಎಂದು ಕ.ವಿ.ವಿ. ಜೈನ ಅಧ್ಯಯನ ಪೀಠದ ಸಂಯೋಜಕ ಡಾ. ಜಿನದತ್ತ ಹಡಗಲಿ ಅಭಿಪ್ರಾಯಪಟ್ಟರು. ​ಅವರು ಶನಿವಾರದಂದು, ರಂದು ಕರ್ನಾಟಕ ವಿದ್ಯಾವರ್ಧಕ ಸಂಘವು, ವ್ಯಾಕರಣ ತೀರ್ಥ ಪಂ. ಚಂದ್ರಶೇಖರ ಶಾಸ್ತ್ರೀಗಳ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಚಂದ್ರಶೇಖರ ಶಾಸ್ತ್ರೀಗಳ ಬದುಕು-ಬರಹ’ ವಿಷಯ ಕುರಿತು ಮಾತನಾಡುತ್ತಿದ್ದರು….

Read More

ಭಾವನೆಗಳನ್ನು ದೃಶ್ಯ ರೂಪದಲ್ಲಿ ವ್ಯಕ್ತಪಡಿಸುವ ಪ್ರಬಲ ಮಾಧ್ಯಮ ಚಿತ್ರಕಲೆ: ಕೆ.ವಿ. ಸುಬ್ರಹ್ಮಣ್ಯಂ

ಧಾರವಾಡ: ಭಾವನೆಗಳನ್ನು ದೃಶ್ಯ ರೂಪದಲ್ಲಿ ವ್ಯಕ್ತಪಡಿಸುವ ಪ್ರಬಲ ಮಾಧ್ಯಮವೇ ಚಿತ್ರಕಲೆಯಾಗಿದ್ದು, ಚಿತ್ರಕಲೆಯ ಒಂದೊಂದು ಬಣ್ಣಗಳು ವಿಭಿನ್ನ ಸಂಕೇತಗಳನ್ನು ಸೂಚಿಸುತ್ತವೆ ಎಂದು ದೃಶ್ಯ ಕಲಾ ಇತಿಹಾಸಕಾರ ಕೆ.ವಿ. ಸುಬ್ರಹ್ಮಣ್ಯಂ ಅವರು ಅಭಿಪ್ರಾಯಪಟ್ಟರು. ಅವರು ಶನಿವಾರ (ಅ. 25,) ಕರ್ನಾಟಕ ವಿದ್ಯಾವರ್ಧಕ ಸಂಘದ (ಕ.ವಿ.ವ. ಸಂಘ) ಚಿತ್ರಕಲಾ ಪ್ರದರ್ಶನ ಸಭಾಭವನದಲ್ಲಿ ಕಲಾವಿದ ವಿಶ್ವನಾಥ ಗುಗ್ಗರಿ ಅವರ ಚಿತ್ರಕಲಾ ಪ್ರದರ್ಶನದ ಪ್ರಾತ್ಯಕ್ಷಿಕೆ ಉದ್ಘಾಟಿಸಿ ಮಾತನಾಡುತ್ತಿದ್ದರು. ​ಇಂದಿನ ದಿನಗಳಲ್ಲಿ ನೈಜ ಚಿತ್ರಕಲೆಗೆ ಹೆಚ್ಚಿನ ಬೇಡಿಕೆ ಇದೆ. ಚಿತ್ರಕಲೆಯು ಮನುಷ್ಯನನ್ನು ಸಂಸ್ಕಾರಗೊಳಿಸುವ ಶಕ್ತಿ ಹೊಂದಿದೆ….

Read More

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವ; ಸ್ಪರ್ಧೆಗಳ ಸ್ಥಳ ಬದಲಾವಣೆ: ಅಕ್ಟೋಬರ್ 27ರ ಕಾರ್ಯಕ್ರಮ ಶ್ರೀನಗರದ ಪರಿಸರ ಭವನಕ್ಕೆ ಸ್ಥಳಾಂತರ

​ಧಾರವಾಡ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಅಂಗವಾಗಿ ಅಕ್ಟೋಬರ್ 27 ರಂದು ಆಯೋಜಿಸಲಾಗಿದ್ದ ಸ್ಪರ್ಧೆಗಳ ಸ್ಥಳವನ್ನು ಬದಲಾಯಿಸಲಾಗಿದೆ ಎಂದು ಜಿಲ್ಲಾ ಪರಿಸರ ಅಧಿಕಾರಿ ಜಗದೀಶ ಐ.ಎಚ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ​ಮಂಡಳಿಯ ಸುವರ್ಣ ಮಹೋತ್ಸವದ ಭಾಗವಾಗಿ ಅಕ್ಟೋಬರ್ 27 ರಂದು ಬೆಳಿಗ್ಗೆ 10:30 ಗಂಟೆಗೆ ಮಹಿಳೆಯರಿಗಾಗಿ ‘ಪರಿಸರ ಸಮೂಹ ಗೀತೆ’ ಸ್ಪರ್ಧೆ ಮತ್ತು ತಾಲೂಕು ಮಟ್ಟದಲ್ಲಿ ನಡೆದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಮೊದಲು…

Read More

ಅರ್ಹ ಪದವೀಧರರು ಮತಪಟ್ಟಿಯಿಂದ ಹೊರಗುಳಿಯದಂತೆ ಜಾಗೃತಿ ವಹಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ:ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ, ಧಾರವಾಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ ಅರ್ಹ ಪದವೀಧರರು ತಮ್ಮ ಹೆಸರುಗಳನ್ನು ಸೇರ್ಪಡೆ ಮಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ವ್ಯಾಪಕವಾದ ‘ಸ್ವೀಪ್’ (SVEEP) ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಧಾರವಾಡ ಜಿಲ್ಲಾ ಸಹಾಯಕ ಮತದಾರರ ನೋಂದಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪಶ್ಚಿಮ ಪದವೀಧರ ಮತಕ್ಷೇತ್ರದ ಮತದಾರರ ನೋಂದಣಿಗೆ ಸಂಬಂಧಿಸಿದ ವಿಡಿಯೋ ಸಂವಾದ ಮತ್ತು ಅಧಿಕಾರಿಗಳ…

Read More

ಯುವಜನತೆ ವಿವೇಕಾನಂದರ ಸಂದೇಶದಿಂದ ಪ್ರೇರಣೆ ಪಡೆದು ದೇಶದ ಉನ್ನತಿಗೆ ಶ್ರಮಿಸಲಿ: ರಾಜ್ಯಪಾಲ ಗೆಹ್ಲೋಟ್ ಕರೆ

ಧಾರವಾಡ: ಭಾರತವು ಆಧ್ಯಾತ್ಮಿಕ ಜಾಗೃತಿ, ಸಾಂಸ್ಕೃತಿಕ ಬಲ ಮತ್ತು ಆಧುನಿಕ ಪ್ರಗತಿಯಿಂದ ಸಮೃದ್ಧವಾಗಬೇಕೆಂಬುದು ಸ್ವಾಮಿ ವಿವೇಕಾನಂದರ ಆಶಯವಾಗಿತ್ತು. ಈ ಹಿನ್ನೆಲೆಯಲ್ಲಿ, ಯುವಜನತೆ ವಿವೇಕಾನಂದರ ಆದರ್ಶಗಳನ್ನು ತಮ್ಮ ಜೀವನ ಮಂತ್ರವನ್ನಾಗಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಕರೆ ನೀಡಿದರು. ಶುಕ್ರವಾರದಂದು ಧಾರವಾಡದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಭವನದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮವು ಆಯೋಜಿಸಿದ್ದ ಕರ್ನಾಟಕ ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ತಿನ 11ನೇ ವಾರ್ಷಿಕ ಸಮ್ಮೇಳನದ…

Read More

ದಿ. ವಿ.ಎಸ್. ಬಸವನಾಳ ಶ್ರೇಷ್ಠ ಸಹಕಾರಿ ದಿಗ್ಗಜ: ಬಿ.ಎಚ್. ಮಂಜಪ್ಪ :ಧಾರವಾಡ ಕೆ.ಸಿ.ಸಿ. ಬ್ಯಾಂಕನ್ನು ಸರ್ವಶ್ರೇಷ್ಠ ಸ್ಥಾನಕ್ಕೆ ತಂದ ರೂವಾರಿ ಎಂದು ಬಣ್ಣನೆ

ಧಾರವಾಡ: ತಮ್ಮ ಶಕ್ತಿ-ಸಾಮರ್ಥ್ಯದಿಂದ ಧಾರವಾಡದ ಕೆ.ಸಿ.ಸಿ. ಬ್ಯಾಂಕನ್ನು ಭಾರತದಲ್ಲೇ ಸರ್ವಶ್ರೇಷ್ಠ ಜಿಲ್ಲಾ ಸಹಕಾರಿ ಬ್ಯಾಂಕನ್ನಾಗಿ ಉನ್ನತ ಸ್ಥಾನಕ್ಕೆ ತಂದ ದಿ. ವಿ.ಎಸ್. ಬಸವನಾಳ ಅವರು ಒಬ್ಬ ಶ್ರೇಷ್ಠ ಸಹಕಾರಿ ದಿಗ್ಗಜರಾಗಿದ್ದರು ಎಂದು ಸಹಕಾರಿ ಇಲಾಖಾ ವಿಶ್ರಾಂತ ಅಪರ ನಿಬಂಧಕ ಬಿ.ಎಚ್. ಮಂಜಪ್ಪ ಬಣ್ಣಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂಘವು, ದಿ. ವಿರೂಪಾಕ್ಷಪ್ಪ ಶಿ. ಬಸವನಾಳ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಸಹಕಾರಿ ಸೇವೆಯಲ್ಲಿ ಬಸವನಾಳರ ಪಾತ್ರ’ ಉಪನ್ಯಾಸ ಮತ್ತು ಕೆ.ಸಿ.ಸಿ. ಬ್ಯಾಂಕ್ ವಿಶ್ರಾಂತ ಸಿಬ್ಬಂದಿಗಳಿಗೆ ‘ಸತ್ಯಶುದ್ಧ ಕಾಯಕ ಪ್ರಶಸ್ತಿ’ ಪ್ರದಾನ…

Read More

​ಕುಂದಗೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಜೂಜಾಟ: 35 ಮಂದಿ ಬಂಧನ, ₹31,080 ನಗದು ವಶ

ಕುಂದಗೋಳ: ತಾಲೂಕಿನಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಇಸ್ಪೀಟ್ ಎಲೆಗಳ ಮೂಲಕ ಜೂಜಾಟದಲ್ಲಿ ತೊಡಗಿದ್ದ 35 ಜನರನ್ನು ಪೊಲೀಸರು ವಿವಿಧ ಕಾರ್ಯಾಚರಣೆಗಳ ಮೂಲಕ ಬಂಧಿಸಿದ್ದಾರೆ. ಅಕ್ಟೋಬರ್ 22 ಮತ್ತು 23, 2025 ರಂದು ನಡೆದ ಐದು ಪ್ರತ್ಯೇಕ ದಾಳಿಗಳಲ್ಲಿ ಒಟ್ಟು ₹31,080 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಎಲ್ಲಾ ಪ್ರಕರಣಗಳು ಕುಂದಗೋಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಒಂದೇ ದಿನ ಮೂರು ಪ್ರಕರಣಗಳು:ಅಕ್ಟೋಬರ್ 22, 2025 ರಂದು ಒಂದೇ ದಿನದಲ್ಲಿ ಮೂರು ಪ್ರಮುಖ ಜೂಜಾಟ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಮೂರು ಪ್ರಕರಣಗಳಲ್ಲಿ ಅಕ್ಟೋಬರ್…

Read More

ಗುಡಗೇರಿ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜೂಜಾಟಕ್ಕೆ ಬ್ರೇಕ್: 3 ದಿನಗಳಲ್ಲಿ 5 ಪ್ರಕರಣ, 29 ಜನರ ಬಂಧನ, ₹24,295 ನಗದು ಜಪ್ತಿ

ಪಬ್ಲಿಕ್ ‌ಸಮಾಚಾರ ಗುಡಗೇರಿ (ಕುಂದಗೋಳ): ಕುಂದಗೋಳ ತಾಲ್ಲೂಕಿನ ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜೂಜಾಟದ ವಿರುದ್ಧ ಪೊಲೀಸ್ ಇಲಾಖೆ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದು, ಅಕ್ಟೋಬರ್ 21 ರಿಂದ 23, 2025ರವರೆಗೆ ಕೇವಲ ಮೂರು ದಿನಗಳ ಅವಧಿಯಲ್ಲಿ ಐದು ಪ್ರತ್ಯೇಕ ದಾಳಿಗಳನ್ನು ನಡೆಸಿ, ಜೂಜಾಟದ ಜಾಲವನ್ನು ಭೇದಿಸಿದೆ. ಈ ಕಾರ್ಯಾಚರಣೆಗಳ ಮೂಲಕ ಒಟ್ಟು 29 ಜನರ ಮೇಲೆ ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಎಫ್‌ಐಆರ್ ದಾಖಲಿಸಲಾಗಿದೆ. ವರದಿಯಾದಂತೆ, ಒಬ್ಬ ಆರೋಪಿಯು ಪೊಲೀಸ್ ದಾಳಿ ವೇಳೆ ಓಡಿ ಹೋಗಿದ್ದಾನೆ….

Read More

ಡಿಸೆಂಬರ್ 7ರಂದು ನವಲಗುಂದದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ: ಪುತ್ರನ ಮದುವೆ ಅದೇ ವೇದಿಕೆಯಲ್ಲಿ ನೆರವೇರಿಸಲಿರುವ ಶಾಸಕ ಕೋನರಡ್ಡಿ

ಪಬ್ಲಿಕ್ ಸಮಾಚಾರ ನವಲಗುಂದ: ದೀಪಾವಳಿ ಹಬ್ಬದ ಪ್ರಯುಕ್ತ ನವಲಗುಂದದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ತಮ್ಮ ಜನಸಂಪರ್ಕ ಕಾರ್ಯಾಲಯದಲ್ಲಿ ಶಾಸಕ ಎನ್.ಎಚ್. ಕೋನರಡ್ಡಿಯವರು ತಮ್ಮ ಕುಟುಂಬದೊಂದಿಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಎನ್.ಎಚ್. ಕೋನರಡ್ಡಿಯವರು, ದೀಪಾವಳಿ ಹಬ್ಬವು ಎಲ್ಲರ ಜೀವನದಲ್ಲಿ ಹರುಷವನ್ನು ತರಲಿ. ನಾಡಿನೆಲ್ಲೆಡೆ ಉತ್ತಮ ಬೆಳೆಗಳಾಗಿ, ರೈತರ ಬಾಳು ಸಮೃದ್ಧಿ ನೀಡಲಿ ಎಂದು ಶುಭಹಾರೈಸಿದರು. ಪುತ್ರನ ವಿವಾಹವೂ ಸಾಮೂಹಿಕ ಕಲ್ಯಾಣದಲ್ಲಿ:ಇದೇ ಸಂದರ್ಭದಲ್ಲಿ ಪ್ರಮುಖ ವಿಷಯವನ್ನು ಪ್ರಕಟಿಸಿದ ಅವರು, ಬರುವ ಡಿಸೆಂಬರ್ ೭…

Read More

ರಾಣಿ ಚನ್ನಮ್ಮ ಅಂಚೆ ಚೀಟಿ ಬಿಡುಗಡೆ: ಕೇಂದ್ರದ ನಿರ್ಧಾರಕ್ಕೆ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸಂತಸ

ನವಲಗುಂದ: ಸ್ವಾತಂತ್ರ್ಯ ಹೋರಾಟಗಾರ್ತಿ ವೀರವನಿತೆ ಕಿತ್ತೂರು ರಾಣಿ ಚನ್ನಮ್ಮನವರ ಸಾಧನೆ ಮತ್ತು ಕಿತ್ತೂರಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಹೆಜ್ಜೆಯಾಗಿ, ಕೇಂದ್ರ ಸರ್ಕಾರವು ಶುಕ್ರವಾರ (ನಾಳೆ) ‘ಅಂಚೆ ಚೀಟಿ’ ಬಿಡುಗಡೆ ಮಾಡುವ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕಟಣೆಯಲ್ಲಿ ಮಾತನಾಡಿದ ಅವರು, ಕಿತ್ತೂರು ಚನ್ನಮ್ಮ ಕನ್ನಡ ನಾಡಿನ ಹೆಮ್ಮೆಯ ಮಗಳು. ಪ್ರತಿಯೊಬ್ಬ ಕನ್ನಡಿಗರೂ ಧನ್ಯತೆಯ ಭಾವದಿಂದ ಸ್ಮರಿಸುವ ಚನ್ನಮ್ಮನ ಅಂಚೆ…

Read More