ಧಾರವಾಡ ಜಿಲ್ಲಾ ಗ್ರಾಮ ಪಂಚಾಯತಿ ನೌಕರರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಸಿಐಟಿಯು ನೇತೃತ್ವದಲ್ಲಿ ಕುಂದಗೋಳದಲ್ಲಿ ಸಮ್ಮೇಳನ; ಮೂರು ವರ್ಷಗಳ ಅವಧಿಗೆ ನೂತನ ಸಮಿತಿ ರಚನೆ ಕುಂದಗೋಳ, ನ.24: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಧಾರವಾಡ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕುಂದಗೋಳದಲ್ಲಿ ನಡೆದ 9ನೇ ಧಾರವಾಡ ಜಿಲ್ಲಾ ಗ್ರಾಮ ಪಂಚಾಯತಿ ನೌಕರರ ಸಂಘದ ಸಮ್ಮೇಳನವು ಮುಂದಿನ ಮೂರು ವರ್ಷಗಳ ಕಾಲಾವಧಿಗೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಿತು. ನವಂಬರ್ 22 ರಂದು ಕುಂದಗೋಳದ ಕಲ್ಯಾಣಪುರ ಬಸವಣ್ಣಜ್ಜ ಮಠದಲ್ಲಿ ಈ ಸಮ್ಮೇಳನ ಯಶಸ್ವಿಯಾಗಿ ನೆರವೇರಿತು. ಸಿಐಟಿಯು ಜಿಲ್ಲಾ ಪ್ರಧಾನ…

