ವಿಕಲಚೇತನರ ದಿನಾಚರಣೆ–2025: ನ.27 ಮತ್ತು 28ರಂದು ಮಕ್ಕಳಿಗೆ, ಪುನರ್ವಸತಿ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಕ್ರೀಡಾಕೂಟ
ಧಾರವಾಡ, ನ.20: ವಿಶ್ವ ವಿಕಲಚೇತನರ ದಿನಾಚರಣೆ–2025 ಅಂಗವಾಗಿ ಧಾರವಾಡ ಜಿಲ್ಲೆಯ ವಿಕಲಚೇತನ ಮಕ್ಕಳಿಗೆ, ಪುನರ್ವಸತಿ ಕಾರ್ಯಕರ್ತರಿಗೆ ಹಾಗೂ ವಿಕಲಚೇತನ ಸಾರ್ವಜನಿಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಶೇಷ ಶಾಲೆಗಳ ಮಕ್ಕಳಿಗಾಗಿ ಕ್ರೀಡಾಕೂಟವನ್ನು ನವೆಂಬರ್ 27, 2025ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ, ಹಾಗೂ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಪುನರ್ವಸತಿ ಕಾರ್ಯಕರ್ತರು ಮತ್ತು ವಿಕಲಚೇತನ ಸಾರ್ವಜನಿಕರಿಗೆ ಕ್ರೀಡಾಕೂಟವನ್ನು ನವೆಂಬರ್ 28, 2025ರಂದು ಇದೇ ವೇಳೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಎರಡೂ ದಿನಗಳ…

