ಪತ್ನಿಯನ್ನು ಕೊಡಲಿಯಿಂದ ಕೊಲೆ ಮಾಡಿದ ಗುರುಶಾಂತಪ್ಪನಿಗೆ ಜೀವಾವಧಿ ಶಿಕ್ಷೆ: ಧಾರವಾಡ ಜಿಲ್ಲಾ ನ್ಯಾಯಾಲಯ ತೀರ್ಪು

ಧಾರವಾಡ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಗೆ ಧಾರವಾಡ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಾಲವಾಡ ಗ್ರಾಮದ ಗುರುಶಾಂತಪ್ಪ ಅನವಾಲದನಿ ಎಂಬಾತ ತನ್ನ ಪತ್ನಿ ಪಾರವ್ವ ಹಾಗೂ ಮನೆಯ ಸದಸ್ಯರು ತನ್ನ ಮೇಲೆ ಮಾಟಮಂತ್ರ ಮಾಡಿಸಿದ್ದಾರೆ ಎಂದು ಆರೋಪಿಸಿ ನಿರಂತರ ಕಿರುಕುಳ ನೀಡುತ್ತಿದ್ದನು. ಇದೇ ವಿಚಾರವಾಗಿ 2024ರ ಮಾರ್ಚ್ 30ರಂದು ನಸುಕಿನ ವೇಳೆ ಮಲಗಿದ್ದ ಪತ್ನಿ ಪಾರವ್ವಳ ಮೇಲೆ…

Read More

ನವಲಗುಂದದಲ್ಲಿ ಸಾರ್ವಜನಿಕರ ಹಣ ನೀರು ಪಾಲು – ಜಲ ಮಂಡಳಿ ಕಳಪೆ ಕಾಮಗಾರಿ ವಿರುದ್ಧ ಜನಾಕ್ರೋಶ ಕೋಟಿ ಕೋಟಿ ಲೂಟಿ??

ನವಲಗುಂದ: ಪಟ್ಟಣದಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಒಳಚರಂಡಿ (ಯುಜಿಡಿ) ಕಾಮಗಾರಿಯು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ನಡೆಯುತ್ತಿರುವ ಈ ಕಾಮಗಾರಿಯಲ್ಲಿ, ಅಭಿವೃದ್ಧಿಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗುತ್ತಿರುವುದು ಅತ್ಯಂತ ಖಂಡನೀಯ. ವಿಶ್ವಾಸಾರ್ಹ ಮೂಲಗಳ ಪ್ರಕಾರ ಈ ಬೃಹತ್ ಯೋಜನೆಗಾಗಿ ಬರೋಬ್ಬರಿ 30 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದರೂ, ಸ್ಥಳದಲ್ಲಿ ನಡೆಯುತ್ತಿರುವ ಕೆಲಸದ ಸ್ಥಿತಿಯನ್ನು ನೋಡಿದರೆ…

Read More

ಕುಂದಗೋಳದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ: ಜನಸಂಖ್ಯಾ ಸ್ಫೋಟದ ಸವಾಲುಗಳ ಕುರಿತು ಜಾಗೃತಿ

ಕುಂದಗೋಳ: ತಾಲೂಕಿನ ಜೆ.ಎಸ್.ಎಸ್. ಕಾಲೇಜಿನಲ್ಲಿ ತಾಲೂಕು ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ ವತಿಯಿಂದ ಅರ್ಥಪೂರ್ಣವಾಗಿ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದ ದೇಶ ಹಾಗೂ ಸಮಾಜ ಎದುರಿಸುತ್ತಿರುವ ಸವಾಲುಗಳ ಕುರಿತು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಲಾಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅಧಿಕಾರಿಗಳು, ನಿಯಂತ್ರಣವಿಲ್ಲದ ಜನಸಂಖ್ಯಾ ಬೆಳವಣಿಗೆಯಿಂದ ಆಹಾರದ ಕೊರತೆ, ಕುಡಿಯುವ ನೀರಿನ ಅಭಾವ, ಗುಣಮಟ್ಟದ ಶಿಕ್ಷಣದ ಕೊರತೆ, ನಿರುದ್ಯೋಗ, ಪರಿಸರ ಮಾಲಿನ್ಯ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳು ಎದುರಾಗುತ್ತಿವೆ ಎಂದು ತಿಳಿಸಿದರು. ಜನಸಂಖ್ಯೆ…

Read More

ಸರ್ವಧರ್ಮ ಸೌಹಾರ್ದದ ಪ್ರತೀಕ: ಜುಲೈ 18, 19ರಂದು ನವಲಗುಂದದ ಅಜಾತ ನಾಗಲಿಂಗಜ್ಜರ ಜಾತ್ರಾ ಮಹೋತ್ಸವ

ನವಲಗುಂದ: ಮಠದಲ್ಲೊಂದು ಬೈಬಲ್ ಇದೆ, ಆದರೆ ಅದು ಚರ್ಚ್ ಅಲ್ಲ… ಮೊಹರಂನ ಪಂಜಾಗಳಿವೆ, ಆದರೆ ಅದು ದರ್ಗಾ ಅಲ್ಲ… ಸಿದಗಿಯಿದೆ, ಆದರೆ ಅದು ರುದ್ರಭೂಮಿಯಲ್ಲ… ಇಂತಹ ಅಪರೂಪದ ವೈಶಿಷ್ಟ್ಯಗಳ ಮೂಲಕ ಜಗತ್ತಿಗೆ ಸರ್ವಧರ್ಮ ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರುತ್ತಿರುವ ನವಲಗುಂದದ ಶ್ರೀ ಅಜಾತ ನಾಗಲಿಂಗೇಶ್ವರ ಮಠದಲ್ಲಿ ಈ ವರ್ಷದ 145ನೇ ಆರಾಧನಾ ಮಹೋತ್ಸವ ಹಾಗೂ ಪಲ್ಲಕ್ಕಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ಜುಲೈ 18 ಮತ್ತು 19ರಂದು ಅಜ್ಜನ ಆರಾಧನೆ ಹಾಗೂ ಪಲ್ಲಕ್ಕಿ ಮಹೋತ್ಸವವು ಭಕ್ತಾದಿಗಳ…

Read More

ಧಾರವಾಡದಲ್ಲಿ ಘೋರ ಕೃತ್ಯ: ಪತ್ನಿಯಿಂದಲೇ ವೈದ್ಯ ಪತಿಯ ಹತ್ಯೆ, ಮಗನ ಮೇಲೂ ಮಾರಣಾಂತಿಕ ಹಲ್ಲೆ!

ಧಾರವಾಡದಲ್ಲಿ ಘೋರ ಕೃತ್ಯ: ಪತ್ನಿಯಿಂದಲೇ ವೈದ್ಯ ಪತಿಯ ಹತ್ಯೆ, ಮಗನ ಮೇಲೂ ಮಾರಣಾಂತಿಕ ಹಲ್ಲೆ! ಧಾರವಾಡ: ಇಡೀ ಸಾಂಸ್ಕೃತಿಕ ನಗರಿಯನ್ನೇ ಬೆಚ್ಚಿಬೀಳಿಸುವ ಭೀಕರ ದುರಂತವೊಂದು ರಂಕಾ ಅಪಾರ್ಟ್‌ಮೆಂಟ್‌ನಲ್ಲಿ ವರದಿಯಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವೈದ್ಯರೊಬ್ಬರನ್ನು ಅವರ ಧರ್ಮಪತ್ನಿಯೇ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಮೃತರನ್ನು ನಲವತ್ತೈದು ವರ್ಷದ ಡಾ. ಕಿರಣ್ ಹೊನಣ್ಣವರ್ ಎಂದು ಗುರುತಿಸಲಾಗಿದೆ. ಆರೋಪ ಎದುರಿಸುತ್ತಿರುವ ಪತ್ನಿ ಪ್ರಿಯಾಂಕಾ ಅವರನ್ನು ಸದ್ಯ ಧಾರವಾಡ ನಗರ ಪೊಲೀಸರು ವಶಕ್ಕೆ ಪಡೆದು ತೀವ್ರ…

Read More

ಜುಲೈ 18ರಂದು ಐಐಟಿ ಧಾರವಾಡ 7ನೇ ಘಟಿಕೋತ್ಸವ: ಸುಧಾ ಮೂರ್ತಿಗೆ ಗೌರವ ಡಾಕ್ಟರೇಟ್ ಪ್ರದಾನ

ಧಾರವಾಡ, ಜು.15: ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ಧಾರವಾಡದ 7ನೇ ಘಟಿಕೋತ್ಸವ ಕಾರ್ಯಕ್ರಮವು ಜುಲೈ 18ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಐಐಟಿ ಧಾರವಾಡ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ಆರ್. ದೇಸಾಯಿ ತಿಳಿಸಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟಿಕೋತ್ಸವದಲ್ಲಿ ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ರಾಷ್ಟ್ರೀಯ ವಿಜ್ಞಾನ ಪೀಠಾಚಾರ್ಯ ಹಾಗೂ ಐಐಟಿ ದೆಹಲಿಯ ಮಾನ್ವಿತ ವಿದ್ಯುತ್ ಅಭಿಯಾಂತ್ರಿಕ ವಿಭಾಗದ ಪ್ರಾಧ್ಯಾಪಕ ಪ್ರೊ. ಭೀಮ್ ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಟಾಟಾ ಪವರ್ ರಿನ್ಯೂವಬಲ್ ಮೈಕ್ರೋಗ್ರಿಡ್‌ನ…

Read More

​ಕುಂದಗೋಳ: ಮನೆಯೂ ಹೋಯ್ತು, ಬದುಕು ಬೀದಿಗೆ ಬಂತು! ಜನಪ್ರತಿನಿಧಿಗಳೇ, ಜಿಲ್ಲಾಡಳಿತವೇ, ತಾಲೂಕು ಆಡಳಿತವೇ ಎಲ್ಲಿ ಹೋದ್ರಿ? ಎಲ್ಲಿ ಸಿಗುತ್ತೆ ಬಡವರಿಗೆ ನ್ಯಾಯ?

ಕುಂದಗೋಳ: ಬಡವನಿಗೆ ಹಸಿವಾದರೆ ಅನ್ನ ನೀಡಬೇಕಾದ, ಆಸರೆ ಕಳೆದುಕೊಂಡರೆ ಸೂಡು ಒದಗಿಸಬೇಕಾದ ವ್ಯವಸ್ಥೆಯೇ ಇವತ್ತು ಬಡವರ ಪಾಲಿಗೆ ಮೃತ್ಯುವಿನಂತೆ ಎರಗಿದೆ. ತಾಲೂಕಿನ ರಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದಾಯ ಇಲಾಖೆಯ ಜಾಗದಲ್ಲಿ ದಶಕಗಳಿಂದ ನೆಮ್ಮದಿಯ ಗೂಡು ಕಟ್ಟಿಕೊಂಡಿದ್ದ 18ಕ್ಕೂ ಅಧಿಕ ಬಡ ಕುಟುಂಬಗಳು ಇಂದು ಅಕ್ಷರಶಃ ಬೀದಿ ಪಾಲಾಗಿವೆ. ತುತ್ತೂರಿ ಊದಬೇಕಾದ ಹಸುಗೂಸುಗಳನ್ನು ಕೈಯಲ್ಲಿ ಎತ್ತಿಕೊಂಡು, ಸುಡುಬಿಸಿಲು ಮತ್ತು ಅನಿಶ್ಚಿತತೆಯ ನಡುವೆ “ನಮಗೊಂದು ಸಣ್ಣ ಜಾಗ ಕೊಡಿ, ನಮ್ಮ ತಲೆಗೊಂದು ಸೂಡು ಕೊಡಿ” ಎಂದು ತಾಯಂದಿರು ಕಣ್ಣೀರಿಡುತ್ತಾ…

Read More

ಧಾರವಾಡ:ಜುಲೈ ತಿಂಗಳ ಪಡಿತರ ಆಹಾರಧಾನ್ಯ ವಿತರಣೆ ಆರಂಭ; ಅರ್ಹ ಫಲಾನುಭವಿಗಳಿಗೆ ಉಚಿತ ವಿತರಣೆ

ಧಾರವಾಡ: ಜುಲೈ-2026ರ ಮಾಹೆಗೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಜಿಲ್ಲೆಯ ಪಡಿತರ ಚೀಟಿದಾರರಿಗೆ ಆಹಾರಧಾನ್ಯ ಬಿಡುಗಡೆ ಮಾಡಲಾಗಿದ್ದು, ಎಲ್ಲ ಅರ್ಹ ಫಲಾನುಭವಿಗಳು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಬೆರಳಚ್ಚು ನೀಡಿ ಉಚಿತವಾಗಿ ಪಡಿತರ ಆಹಾರಧಾನ್ಯ ಪಡೆಯುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂತ್ಯೋದಯ ಪಡಿತರ ಚೀಟಿದಾರರಿಗೆ ಪ್ರತಿ ಪಡಿತರ ಚೀಟಿಗೆ 14 ಕೆಜಿ ಅಕ್ಕಿ ಹಾಗೂ 21 ಕೆಜಿ ಜೋಳ ಸೇರಿದಂತೆ ಒಟ್ಟು 35 ಕೆಜಿ ಆಹಾರಧಾನ್ಯ…

Read More

ಧಾರವಾಡ ಹೈಕೋರ್ಟ್‌ನಲ್ಲಿ ರಾಷ್ಟ್ರೀಯ ಲೋಕ ಅದಾಲತ್: 366 ಪ್ರಕರಣ ಇತ್ಯರ್ಥ, ₹16.62 ಕೋಟಿ ಪರಿಹಾರಕ್ಕೆ ರಾಜಿ

ಧಾರವಾಡ: ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠದಲ್ಲಿ ಜುಲೈ 11ರಂದು ಹಿರಿಯ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ ಅವರ ನೇತೃತ್ವದಲ್ಲಿ ದ್ವಿತೀಯ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಿ ನಡೆಯಿತು. ನ್ಯಾಯಮೂರ್ತಿಗಳಾದ ಸಚಿನ್ ಶಂಕರ ಮಗದುಮ್, ಸಿ.ಎಂ. ಪೂನಚ್ಚ ಹಾಗೂ ಗೀತಾ ಕೆ.ಬಿ. ಅವರೊಂದಿಗೆ ಲೋಕ ಅದಾಲತ್ ಸದಸ್ಯರಾದ ಕೆ.ಎಲ್. ಪಾಟೀಲ, ಸಾಜಿದ್ ಗೂಡವಾಲಾ, ಎಂ.ಎಸ್. ಹಳ್ಳಿಕೇರಿ ಮತ್ತು ವಿದ್ಯಾವತಿ ಕೊಟ್ಟೂರಶೆಟ್ಟರ್ ಪಾಲ್ಗೊಂಡಿದ್ದು, ಒಟ್ಟು ನಾಲ್ಕು ಪೀಠಗಳನ್ನು ರಚಿಸಲಾಗಿತ್ತು. ಲೋಕ ಅದಾಲತ್‌ನಲ್ಲಿ ಒಟ್ಟು 1,037 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು,…

Read More

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಅರ್ಜಿ ಆಹ್ವಾನ: ಆಗಸ್ಟ್ 31ರವರೆಗೆ ನೋಂದಣಿಗೆ ಅವಕಾಶ

ಧಾರವಾಡ, ಜು.7: 2026-27ನೇ ಸಾಲಿನ ಮುಂಗಾರು ಹಂಗಾಮಿಗಾಗಿ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ರೈತರ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಅರ್ಹ ರೈತರು ಆಗಸ್ಟ್ 31, 2026ರೊಳಗೆ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳುವಂತೆ ತೋಟಗಾರಿಕೆ ಇಲಾಖೆ ತಿಳಿಸಿದೆ. ಈ ಯೋಜನೆಯಡಿ ಕಲಘಟಗಿ ತಾಲೂಕಿನ ಎಲ್ಲಾ ಹೋಬಳಿಗಳಲ್ಲಿ ಮಾವು ಹಾಗೂ ದುಮ್ಮವಾಡ ಹೋಬಳಿಯಲ್ಲಿ ಹಸಿ ಮೆಣಸಿನಕಾಯಿ ಬೆಳೆಯುವ ರೈತರು ಬೆಳೆ ವಿಮೆ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಲು ರೈತರು ಕಡ್ಡಾಯವಾಗಿ ಫಾರ್ಮರ್ ಐಡಿ (FID) ಹೊಂದಿರಬೇಕು….

Read More