ಕುಂದಗೋಳ ತಾ.ಪಂ ಇಒ ಜಗದೀಶ ಕಮ್ಮಾರ ಉಡುಪಿಯ ಹೆಬ್ರಿಗೆ ವರ್ಗಾವಣೆ: ಕುಂದಗೊಳಕ್ಕೆ ಅಳ್ಳಾವರ ಇಒ ಪ್ರಶಾಂತ ತುರಕಾಣಿಗೆ ಹೆಚ್ಚುವರಿ ಪ್ರಭಾರ
ಧಾರವಾಡ: ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಆಡಳಿತಾತ್ಮಕ ಬದಲಾವಣೆಗಳಾಗಿದ್ದು, ಕುಂದಗೋಳ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಧಾರವಾಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳ ಆದೇಶದನ್ವಯ, ಕುಂದಗೋಳ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಶ್ರೀ ಜಗದೀಶ ಎಸ್. ಕಮ್ಮಾರ ಅವರನ್ನು ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕು ಪಂಚಾಯತ್‌ನ ತೆರವಾಗಿರುವ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ನಿಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಗದೀಶ ಕಮ್ಮಾರ ಅವರನ್ನು ಮಾರ್ಚ್…

