ತರ್ಲಘಟ್ಟ: ಹುಲಗೂರ-ಶಿಗ್ಗಾವ ರಸ್ತೆ ಪಕ್ಕದ ಜಮೀನಿನಲ್ಲಿ ಅಗ್ನಿ ಅವಘಡ; ಆರು ಮೇವಿನ ಬಣವೆಗಳು ಭಸ್ಮ
ಕುಂದಗೋಳ: ತಾಲೂಕಿನ ತರ್ಲಘಟ್ಟ ಗ್ರಾಮದ ವ್ಯಾಪ್ತಿಯಲ್ಲಿರುವ ಹುಲಗೂರ-ಶಿಗ್ಗಾವ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಜಮೀನಿನಲ್ಲಿ ಇಂದು ಸಂಜೆ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ರೈತರು ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮೇವು ಹಾಗೂ ಬೆಳೆ ಬೆಂಕಿಗಾಹುತಿಯಾಗಿದೆ. ಸುಮಾರು 5 ಗಂಟೆ ವೇಳೆಗೆ ಕಾಣಿಸಿಕೊಂಡ ಈ ಬೆಂಕಿಯು ಕಿಡಿಗೇಡಿಗಳ ದುಷ್ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ. ಗ್ರಾಮದ ರೈತರಾದ ಸಿದ್ದಲಿಂಗಪ್ಪ ಅಂಗಡಿ, ಬಸಪ್ಪ ಹಸಬಿ ಹಾಗೂ ಗುರುಸಿದ್ದಪ್ಪ ದ್ಯಾವನೂರ ಎಂಬುವವರಿಗೆ ಸೇರಿದ ಆರು ಗೋವಿನಜೋಳದ ಹೊಟ್ಟಿನ ಬಣವೆಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಂಪೂರ್ಣ…

