ಸುಧಾ ಪ್ರಕಾಶ ಪಟ್ಟಣಶೆಟ್ಟಿ ಸಿವಿಲ್ ನ್ಯಾಯಾಧೀಶರಾಗಿ ನೇಮಕ: ಗುರುಕುಲ ಸಂಸ್ಥೆಯಿಂದ ಸನ್ಮಾನ
ನವಲಗುಂದ: ಬ್ಯಾಲಿಳ ಗ್ರಾಮದ ತಾಲೂಕಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಪ್ರಗತಿಪರ ರೈತರಾದ ದಿ. ಪ್ರಕಾಶ ಪಟ್ಟಣಶೆಟ್ಟಿ ಅವರ ಪುತ್ರಿ ಸುಧಾ ಪ್ರಕಾಶ ಪಟ್ಟಣಶೆಟ್ಟಿ ಅವರು ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುಕುಲ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ದೇವರಾಜ್ ಬಿ. ದಾಡಿಬಾವಿ ಅವರು ಅವರನ್ನು ಸನ್ಮಾನಿಸಿದರು. ಸನ್ಮಾನ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಗುರಪ್ಪ ಈರೆಶನವರ, ಉಮೇಶ ಧಾರವಾಡ, ಪರಮೇಶ್ವರ ಪಟ್ಟಣಶೆಟ್ಟಿ, ಸಂಗಮೇಶ ಮುತ್ತಗಿ, ಬಸನಗೌಡ ಪಾಟೀಲ, ಬಸವರಾಜ ಸವದಿ, ರಾಜಣ್ಣ ಶಿವಪ್ಪಯ್ಯನವರ, ಗಂಗಪ್ಪ ತಳವಾರ, ಈರಣ್ಣ…

