ವಿಷಯುಕ್ತ ಹೊಗೆ ನಿಯಂತ್ರಣಕ್ಕೆ ಆಗ್ರಹಿಸಿ ಶಿವಸೇನೆ ಪ್ರತಿಭಟನೆ
ಧಾರವಾಡ: ಧಾರವಾಡ ಹೊಸ ಯಲ್ಲಾಪೂರದ ಬಳಿಯಲ್ಲಿರುವ ಕಸ ವಿಲೇವಾರಿ ಘಟಕದಲ್ಲಿ ಕಸದ ಗುಡ್ಡಕ್ಕೆ ಬೆಂಕಿ ಹೊತ್ತಿಕೊಂಡು ವಿಷಯುಕ್ತ ಹೊಗೆ ಧಾರವಾಡ ನಗರದ ವಿವಿಧ ಕಡೆಗಳಲ್ಲಿ ಹರಡಿಕೊಂಡು ಜನರು ಪರದಾಡುವ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಶಿವಸೇನೆ ಪಕ್ಷದ ಮುಖಂಡರು ಧಾರವಾಡ ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಧಾರವಾಡ ಹೊಸ ಯಲ್ಲಾಪುರ ರುದ್ರಭೂಮಿಯ ಬಳಿಯ ಕಸ ವಿಲೇವಾರಿ ಘಟಕದ ಸುತ್ತಮುತ್ತಲಿನ ಟೋಲ್ ನಾಖಾ, ವಿದ್ಯಾಗಿರಿ, ಲಕ್ಷ್ಮೀ ನಗರ, ಜನ್ನತ್ ನಗರ, ಹೊಸ ಯಲ್ಲಾಪೂರ, ನವಲೂರ ಆಗಸಿ, ಯಾಲಕ್ಕಿ…

