ವರದಕ್ಷಿಣೆ ಕಿರುಕುಳ: ಯುವತಿಯನ್ನು ಸುಟ್ಟು ಕೊಂದ ಪತಿ ಮತ್ತು ಕುಟುಂಬ

ಗ್ರೇಟರ್ ನೋಯ್ಡಾ: ಹೆಚ್ಚಿನ ವರದಕ್ಷಿಣೆಗಾಗಿ ಪೀಡಿಸಿ, ಕೌಟುಂಬಿಕ ಕಿರುಕುಳ ನೀಡಿದ ಪರಿಣಾಮವಾಗಿ ಪತಿ ಮತ್ತು ಆತನ ಕುಟುಂಬದ ಸದಸ್ಯರು 26 ವರ್ಷದ ಯುವತಿಯೊಬ್ಬಳಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿರುವ ಅಘಾತಕಾರಿ ಘಟನೆ ಇಲ್ಲಿನ ಸಿರ್ಸಾ ಗ್ರಾಮದಲ್ಲಿ ನಡೆದಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿ ಹಾಗೂ ಪತಿ ವಿಪಿನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ವಿವರ:ಮೃತ ಯುವತಿಯನ್ನು ನಿಕ್ಕಿ ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ವಿಪರೀತ ಸುಟ್ಟ ಗಾಯಗಳೊಂದಿಗೆ ಆಕೆಯನ್ನು ಗ್ರೇಟರ್ ನೋಯ್ಡಾದ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ…

Read More

ಬೆಂಗಳೂರಿನಲ್ಲಿ 5 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ, ಇಬ್ಬರು ಆಫ್ರಿಕಾ ಪ್ರಜೆಗಳ ಬಂಧನ

ಬೆಂಗಳೂರು: ಡ್ರಗ್ಸ್ ಮಾರಾಟ ದಂಧೆ ವ್ಯಾಪಕವಾಗಿ ಹರಡಿದ್ದು, ಈ ಕಳ್ಳದಂಧೆಗೆ ಕಡಿವಾಣ ಹಾಕಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಬೆಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ, ಬರೋಬ್ಬರಿ 5 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರು ಆಫ್ರಿಕಾ ಮೂಲದ ಪ್ರಜೆಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತ ಆರೋಪಿಗಳನ್ನು ಆಫ್ರಿಕಾ ಮೂಲದ ಪ್ರಜೆಗಳಾದ ಜೊಯಲ್ ಕಾಬೊಂಗ್ ಮತ್ತು ಮಹಿಳೆಯಾದ ಜೊಯ್ ಸಂಡೇ ಎಂದು ಗುರುತಿಸಲಾಗಿದೆ. ಈ ಇಬ್ಬರು ಆರೋಪಿಗಳು ವೀಸಾ ಅವಧಿ ಮುಗಿದಿದ್ದರೂ ಬೆಂಗಳೂರಿನಲ್ಲಿ ಅಕ್ರಮವಾಗಿ…

Read More

ಧಾರವಾಡ: ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರೆಡ್ಡಿಯವರಿಗೆ ಸೇರಿದ ಫಾರ್ಮ್‌ಹೌಸ್‌ನಲ್ಲಿ ದರೋಡೆ, 15 ಜನರ ಬಂಧನ

ಧಾರವಾಡ: ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಮತ್ತು ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ಸೇರಿದ ಧಾರವಾಡದ ಫಾರ್ಮ್‌ಹೌಸ್‌ನಲ್ಲಿ ದರೋಡೆ ನಡೆದಿದ್ದು, ಈ ಸಂಬಂಧ 15 ಜನರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಆಗಸ್ಟ್ 13ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡ ತಾಲ್ಲೂಕಿನ ದಡ್ಡಿಕಮಲಾಪುರ ಗ್ರಾಮದ ಬಳಿ ಇರುವ ‘ಮಮತಾ’ ಎಂಬ ಫಾರ್ಮ್‌ಹೌಸ್‌ಗೆ ಆಗಸ್ಟ್ 13ರಂದು ರಾತ್ರಿ ಸುಮಾರು 8-10 ಜನರ ಗುಂಪೊಂದು ನುಗ್ಗಿದೆ. ಫಾರ್ಮ್‌ಹೌಸ್‌ನಲ್ಲಿ ಮಲಗಿದ್ದ ಕಣ್ಣಪ್ಪ ಜಡ್ಡಿ, ಹನುಮಂತ ಧನದಾವರ್, ಅಶೋಕ ಪೋತಲಿ ಮತ್ತು ಲಕ್ಷ್ಮಣ…

Read More

ಮಡಿಕೇರಿ: ಪೊಲೀಸರ ಮನೆಯಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಕೊಡಗು ಪೊಲೀಸರು

ಮಡಿಕೇರಿ: ಪೊಲೀಸರ ವಸತಿ ಗೃಹದಲ್ಲೇ ನಡೆದ ಕಳ್ಳತನ ಪ್ರಕರಣವನ್ನು ಕೊಡಗು ಜಿಲ್ಲಾ ಪೊಲೀಸರು ಭೇದಿಸಿ, ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಮಧ್ಯಪ್ರದೇಶದಲ್ಲಿ ಬಂಧಿಸಿದ್ದಾರೆ. ಈ ಮೂಲಕ ಕರ್ನಾಟಕ ಮತ್ತು ಹೊರ ರಾಜ್ಯಗಳಲ್ಲಿ ನಡೆದ ಅನೇಕ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಕಳ್ಳರ ಜಾಡು ಹಿಡಿದು ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.ಜೂನ್ 17ರಂದು ಮಡಿಕೇರಿ ನಗರದ ಓಲ್ಡ್ ರೈಫಲ್ ರೇಂಜ್ ಪೊಲೀಸ್ ವಸತಿ ಗೃಹದಲ್ಲಿ ಎಂಟು ಮನೆಗಳ ಬಾಗಿಲು ಮುರಿದು ಕಳ್ಳತನ ಮಾಡಲಾಗಿತ್ತು. ಈ ಪೈಕಿ ಮೂರು ಮನೆಗಳಿಂದ…

Read More

ಚಿಕ್ಕಮಗಳೂರು: ಜೀಪ್ ಚಾಲಕ ಆತ್ಮಹತ್ಯೆ ಪ್ರಕರಣ; ಪೊಲೀಸರಿಂದ ಕಾನ್ಸ್​​ಟೇಬಲ್ ಬಂಧನ

ಚಿಕ್ಕಮಗಳೂರು: ಕಳಸ ತಾಲ್ಲೂಕಿನ ಬಸ್ತಿಗದ್ದೆ ಗ್ರಾಮದ ಜೀಪ್ ಚಾಲಕ ನಾಗೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಿರುಕುಳ ನೀಡಿದ ಆರೋಪದ ಮೇಲೆ ಕುದುರೆಮುಖ ಪೊಲೀಸ್ ಠಾಣೆಯ ಕಾನ್ಸ್​​ಟೇಬಲ್ ಸಿದ್ದೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಹಿನ್ನೆಲೆ:ಕಳೆದ ಜುಲೈ 17ರಂದು ಜೀಪ್ ಚಾಲಕ ನಾಗೇಶ್ ತನ್ನ ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ, ಕುದುರೆಮುಖ ಪೊಲೀಸ್ ಠಾಣೆಯ ಪೇದೆ ಸಿದ್ದೇಶ್ ರಸ್ತೆಯ ಮಧ್ಯದಲ್ಲಿ ಸ್ನೇಹಿತರೊಂದಿಗೆ ಮದ್ಯಪಾನ ಮಾಡುತ್ತಿದ್ದರು. ರಸ್ತೆಯನ್ನು ಬಿಟ್ಟು ಪಕ್ಕಕ್ಕೆ ನಿಲ್ಲುವಂತೆ ನಾಗೇಶ್ ಸೂಚಿಸಿದಾಗ, ಕೋಪಗೊಂಡ ಸಿದ್ದೇಶ್ ನಾಗೇಶ್‌ ಮೇಲೆ ಹಲ್ಲೆ ನಡೆಸಿದ್ದಾರೆ…

Read More

ಕಂಪ್ಲಿ: ಸ್ಮಶಾನ ರಸ್ತೆ ಜಲಾವೃತ, ಶವ ಹೊತ್ತೊಯ್ಯಲು ಹರಸಾಹಸ – ಸ್ಮಶಾನಕ್ಕೆ ದಾರಿ ಯಾವುದಯ್ಯಾ?

ಬಳ್ಳಾರಿ: ಕಂಪ್ಲಿ ತುಂಗಭದ್ರಾ ಜಲಾಶಯ ತುಂಬಿ ನದಿಗೆ ಲಕ್ಷಾಂತರ ಕ್ಯೂಸೆಕ್ ನೀರು ಬಿಟ್ಟಿರುವ ಪರಿಣಾಮ, ಕಂಪ್ಲಿ-ಕೋಟೆ ಸಮೀಪದ ನದಿ ತೀರದಲ್ಲಿರುವ ವಿವಿಧ ಸಮುದಾಯಗಳ ಸ್ಮಶಾನಕ್ಕೆ ಹೋಗುವ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದಾಗಿ ಮೃತದೇಹಗಳ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಹರಗೋಲುಗಳಲ್ಲಿ ಶವಗಳನ್ನು ಹೊತ್ತು, ಪ್ರವಾಹದ ನೀರಿನಲ್ಲೇ ಹರಸಾಹಸ ಮಾಡುವ ದಾರುಣ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ಇಂದು ನಿನ್ನೆಯದಲ್ಲ. ಪ್ರತಿ ವರ್ಷ ಜಲಾಶಯ ಭರ್ತಿಯಾಗಿ ಪ್ರವಾಹ ಬಂದಾಗಲೆಲ್ಲಾ ಈ ಸ್ಮಶಾನ ರಸ್ತೆ ಮುಳುಗುವುದು ಸಾಮಾನ್ಯವಾಗಿದೆ. ಆದರೂ, ದಶಕಗಳಿಂದಲೂ ಈ…

Read More

ರಾಮದುರ್ಗದಲ್ಲಿ ಭೀಕರ ಅಪಘಾತ: ದೇವಸ್ಥಾನಕ್ಕೆ ತೆರಳುತ್ತಿದ್ದ ಅರ್ಚಕ ಸೇರಿ ಇಬ್ಬರು ಸಾವು

ರಾಮದುರ್ಗ: ಟಾಟಾ ಏಸ್ ವಾಹನ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಅರ್ಚಕರೊಬ್ಬರು ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ರಾಮದುರ್ಗ ಪಟ್ಟಣದ ಶಿವನಮೂರ್ತಿ ದೇವಸ್ಥಾನದ ಬಳಿ ಭಾನುವಾರ ನಡೆದಿದೆ. ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮತ್ತಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಅರ್ಚಕರಾದ ವಿಜಯಕುಮಾರ ಗಣಪತಿ ಗೋಡಬೋಲೆ (54) ಮತ್ತು ಟಾಟಾ ಏಸ್ ವಾಹನದ ಚಾಲಕ, ಗುಲ್ಬರ್ಗಾದ ನಿವಾಸಿ ಅನೀಲ ರಮೇಶ ಬಿರಾದಾರ (21) ಎಂದು ಗುರುತಿಸಲಾಗಿದೆ. ಘಟನೆ ವಿವರ:ಘಟನೆ ನಡೆದ ಸಂದರ್ಭದಲ್ಲಿ, ಸವದತ್ತಿಯಿಂದ…

Read More

ಹೈದರಾಬಾದ್: ಮೆರವಣಿಗೆಯ ರಥಕ್ಕೆ ವಿದ್ಯುತ್ ತಂತಿ ಸ್ಪರ್ಶ, ಐವರು ಸಾವು: ಕೆಲವರಿಗೆ ಗಂಭೀರ ಗಾಯ:

ಹೈದರಾಬಾದ್: ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದ ರಥಕ್ಕೆ ವಿದ್ಯುತ್ ತಂತಿ ತಾಗಿ ಐವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಹೈದರಾಬಾದ್‌ನ ರಾಮಂತಪುರದ ಗೋಕುಲೇನಗರದಲ್ಲಿ ಭಾನುವಾರ ಮಧ್ಯರಾತ್ರಿ ಸಂಭವಿಸಿದೆ. ಈ ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಆಚರಣೆಯ ಅಂಗವಾಗಿ ಗೋಕುಲೇನಗರದಲ್ಲಿ ಮೆರವಣಿಗೆ ನಡೆಯುತ್ತಿತ್ತು. ಮೆರವಣಿಗೆಯ ನೇತೃತ್ವ ವಹಿಸಿದ್ದ ರಥವನ್ನು ಎಳೆಯುತ್ತಿದ್ದ ವಾಹನ ಇದ್ದಕ್ಕಿದ್ದಂತೆ ಕೆಟ್ಟು ನಿಂತಿತ್ತು. ಈ ವೇಳೆ, ಅಲ್ಲಿದ್ದ ಯುವಕರೆಲ್ಲರೂ ಸೇರಿ ರಥವನ್ನು ಕೈಯಿಂದಲೇ ತಳ್ಳಲು ಆರಂಭಿಸಿದ್ದರು….

Read More

ಅಪರಿಚಿತ ವಾಹನ ಡಿಕ್ಕಿ, ಸ್ಥಳದಲ್ಲೇ 05 ಹಸುಗಳು ಸಾವು, 07 ಹಸುಗಳಿಗೆ ಗಂಭೀರ ಗಾಯ.

ಚಿಕ್ಕಮಗಳೂರು: 12 ದನಗಳಿಗೆ ಡಿಕ್ಕಿ ಹೊಡೆದು ಪರಾರಿಯಾದ ವಾಹನ, 5 ಸಾವು, 7ಕ್ಕೆ ಗಾಯಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಅಬಿಗೇರಿ-ಹೆಬರಿಗೆ ರಸ್ತೆಯಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ಐದು ದನಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಏಳು ದನಗಳು ಗಂಭೀರವಾಗಿ ಗಾಯಗೊಂಡಿವೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ರಸ್ತೆ ಬದಿಯಲ್ಲಿದ್ದ 12 ದನಗಳಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದೆ. ಅಪಘಾತದ ತೀವ್ರತೆಗೆ ಐದು ದನಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ, ಉಳಿದ ಏಳು ದನಗಳು ಗಂಭೀರವಾಗಿ ಗಾಯಗೊಂಡಿವೆ. ಘಟನೆಯ ಬಗ್ಗೆ…

Read More

ಸಿಡಿಲು ಬಡಿದು ಯುವಕನೊರ್ವ ಸಾವು

ಸಿಡಿಲು ಬಡಿದು ಯುವಕನೋರ್ವ ಸಾವು ಕರ್ನಾಟಕ: ಯಾದರಿಗಿ ಜಿಲ್ಲೆ ಹುಣಸಗಿ ತಾಲೂಕಿನಲ್ಲಿ ಶುಕ್ರವಾರದಂದು ಸುರಿದ ಗುಡುಗು ಸಹಿತ ಮಳೆಯಿಂದಾಗಿ ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟ ಘಟನೆ ಮದಲಿಂಗನಾಳ ಗ್ರಾಮದ ಜಮೀನಿನಲ್ಲಿ ನಡೆದಿದೆ. ಪರಮಣ್ಣ ಸೋಮನಿಂಗಪ್ಪ ಕಕ್ಕೇರಿ(28) ಇತನು ಸ್ಥಳದಲ್ಲಿ ಮೃತಪಟ್ಟಿದ್ದರೆ, ಇನ್ನೋರ್ವ ವ್ಯಕ್ತಿ ಹಣಮಂತ ಸೋಮನಿಂಗಪ್ಪ ಕಕ್ಕೇರಿ(30) ಸಿಡಿಲಿನ ತೆರೆ ಬಡಿದು ಆಘಾತಕೀಡಾಗಿದ್ದು ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ. ಅಗತ್ಯ ಬಿದ್ದರೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ವೈದ್ಯಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಹಶೀಲ್ದಾರ ಎಂ.ಬಸವರಾಜ್ ಅವರು ತಿಳಿಸಿದ್ದಾರೆ. ಜಮೀನುನಲ್ಲಿ…

Read More