ಚಿಕ್ಕನೇರ್ತಿ: 60 ಎಕರೆ ಆಸ್ತಿ ವಿವಾದ ಬಲಿ? ಅಟ್ಟದಲ್ಲಿ ಶವವಾದ ಯುವಕ: 8 ಜನರ ವಿರುದ್ಧ ‘ಕಿರುಕುಳ’ ಆರೋಪದಡಿ ಎಫ್‌ಐಆರ್
ಕುಂದಗೋಳ: ಆಸ್ತಿ ಕಲಹಕ್ಕೆ ಸಂಬಂಧಿಸಿದಂತೆ ಕೆಲವರಿಂದ ತೀವ್ರ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದ ಕುಂದಗೋಳ ತಾಲ್ಲೂಕು ಚಿಕ್ಕನೇರ್ತಿ ಗ್ರಾಮದ ಯುವಕನೋರ್ವ ಮನೆಯ ಅಟ್ಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಗೆ ಕಿರುಕುಳವೇ ಕಾರಣ ಎಂದು ಮೃತನ ಕುಟುಂಬಸ್ಥರು ದೂರು ನೀಡಿದ್ದು, ಪೊಲೀಸರು ಒಟ್ಟು ಎಂಟು ಮಂದಿ ಆರೋಪಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಗಂಭೀರ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೃತರನ್ನು ಚಿಕ್ಕನೇರ್ತಿ ಗ್ರಾಮದ ನಿವಾಸಿ, 23 ವರ್ಷದ ಫಕ್ಕೀರೇಶ…

