ಪರಪ್ಪನ ಅಗ್ರಹಾರ: ‘ಕಳ್ಳಬಟ್ಟಿ ತಯಾರಿಕೆ’ ಜಾಲ ಬಯಲು? ಜೈಲಾಧಿಕಾರಿಗಳಿಗೆ ವಿಡಿಯೋ ಇಟ್ಟು ಬೆದರಿಕೆ!
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಮತ್ತೊಮ್ಮೆ ಗಂಭೀರ ಭದ್ರತಾ ಲೋಪದ ಆರೋಪದ ಸುಳಿಯಲ್ಲಿ ಸಿಲುಕಿದ್ದು, ಸಜಾ ಬಂದಿಗಳು ಮತ್ತು ವಿಚಾರಣಾಧೀನ ಕೈದಿಗಳು ಇರಿಸಲಾದ ಬ್ಯಾರಕ್‌ಗಳಲ್ಲಿಯೇ ಕಳ್ಳಬಟ್ಟಿ ಮಾದರಿಯ ನಶೆ ಏರಿಸುವ ಮದ್ಯವನ್ನು ತಯಾರಿಸುತ್ತಿದ್ದರೆಂಬ ಆತಂಕಕಾರಿ ಸಂಶಯ ವ್ಯಕ್ತವಾಗಿದೆ. ಜೈಲಿನೊಳಗಿನ ಕೊಳೆತ ಹಣ್ಣುಗಳ ಭಾರೀ ದಾಸ್ತಾನಿನ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜೈಲಿನ ಭದ್ರತಾ ವ್ಯವಸ್ಥೆಯು ಸಂಪೂರ್ಣ ಕುಸಿದಿದೆಯೇ ಎಂಬ ಪ್ರಶ್ನೆ ಎದ್ದಿದೆ. ಬ್ಯಾರಕ್‌ವೊಂದರಲ್ಲಿ ಕೊಳೆತ ದ್ರಾಕ್ಷಿ, ಸೇಬು, ಗೋಧಿ, ಸಕ್ಕರೆ ಹಾಗೂ ತಂಬಾಕು ಉತ್ಪನ್ನಗಳನ್ನು ಸಂಗ್ರಹಿಸಿರುವುದು…

