ನಿರಂತರ ಪ್ರಯತ್ನದಿಂದ ದೊಡ್ಡ ಸಂಸ್ಥೆ ಕಟ್ಟಲು ಸಾಧ್ಯ- ಶಿವಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು

Spread the love

ನವಲಗುಂದ: ಒಂದು ಶಿಕ್ಷಣ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆಯಬೇಕಾದರೆ ಆಡಳಿತ ಮಂಡಳಿ ಮತ್ತು ಶಿಕ್ಷಕರ ಬಳಗದ ನಿರಂತರ ಪ್ರಯತ್ನದಿಂದ ಮಾತ್ರ ಸಾದ್ಯ ಎಂದು ಸುಳ್ಳ ಹಾಗೂ ಹೂಲಿಯ ಪಂಚಗ್ರಹ ಹಿರೇಮಠದ
ಷ. ಬ್ರ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು..

ಪಟ್ಟಣದ ಬಸ್ತಿ ಪ್ಲಾಟನಲ್ಲಿರುವ ಶ್ರೀ ವಿದ್ಯಾಜ್ಯೋತಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ದಶಮಾನೋತ್ಸವ ಸಂಭ್ರಮ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟನೆ ಮಾಡಿ ಮಾತನಾಡಿದ ಅವರು ಈ ಸಂಸ್ಥೆಯು ಉತ್ತರೋತ್ತರ ಬೆಳಯಲಿ, ಗಿಡಗಳಿಗೆ ಯಾವ ರೀತಿ ಟೊಂಗೆಗಳು ಇರುತ್ತವೆಯೋ ಅದೇ ರೀತಿ ಈ ಸಂಸ್ಥೆಯು ಶಾಖೆಗಳಾಗಿ ವಿದ್ಯಾ ಸಂಸ್ಥೆ ತೆರೆಯಲಿ ಎಂದು ಆಶೀರ್ವಚನ ನೀಡಿದರು.

ಅಖಿಲ ಭಾರತ ಶಿಕ್ಷಕರ ಪೇಡರೇಷನ ಅಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ ಶ್ರೀ ಸರಸ್ವತಿ ಶಿಕ್ಷಣ ಸಂಸ್ಥೆಯ ವಿದ್ಯಾಜ್ಯೋತಿ ಪ್ರಾಥಮಿಕ ಶಾಲೆಯು ಉತ್ತಮ ಶಿಕ್ಷಣದ ವ್ಯವಸ್ಥೆಯನ್ನು ಹೊಂದಿದೆ, ಇದರ ಸಂಸ್ಥಾಪಕ ಕಾರ್ಯದರ್ಶಿಗಳಾದ ಭರತೇಶ ಕುರುಬರ ಅವರ ನಿರಂತರ ಶ್ರಮದಿಂದ ಇಷ್ಟು ದೊಡ್ಡ ಮಟ್ಟದ ವಿದ್ಯಾ ಸಂಸ್ಥೆಯಾಗಿದೆ, ಈ ಸಂಸ್ಥೆಯು ಮುಂದೆಯು ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು.

ಕಿತ್ತೂರು ಆರಕ್ಷಕ ವೃತ್ತ ನಿರೀಕ್ಷಕರಾದ ಶಿವಾನಂದ ಗುಡಗನಟ್ಟಿ ಮಾತನಾಡಿ ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ಅವರನ್ನೇ ದೊಡ್ಡ ಆಸ್ತಿಯನ್ನಾಗಿ ಮಾಡಿ ಎಂದು ಪಾಲಕರಿಗೆ ಸಲಹೆ ನೀಡಿದ ಅವರು ಪಾಲಕರು ಸಹ ಶಾಲೆಗೆ ಬಂದು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಶಿಕ್ಷಕರಲ್ಲಿ ವಿಚಾರಿಸಬೇಕು, ನವಲಗುಂದ ತಾಲ್ಲೂಕಿನಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವಂತಹ ಸಂಸ್ಥೆಯಲ್ಲಿ ಸರಸ್ವತಿ ಶಿಕ್ಷಣ ಸಂಸ್ಥೆಯು ಒಂದಾಗಿದೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಾದ ಬಿ. ಜಿ ಕೋನರಡ್ಡಿ, ಡಾ ಆನಂದ ಗುಡಿ, ರೇಖಾ ಕಲ್ಲಯ್ಯನಮಠ,ಸಿದ್ದವಿರಸ್ವಾಮಿ ಹಿರೇಮಠ, ಸತೀಶ ಕುಲಕರ್ಣಿ, ಸಾಯಿಬಾಬಾ ಆನೆಗುಂದಿ,ಸಾವಕ್ಕ ಪೂಜಾರ, ದ್ಯಾಮಪ್ಪ ಪೂಜಾರ ಅವರನ್ನು ಸರಸ್ವತಿ ಶಿಕ್ಷಣ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು..

ಈ ಸಂದರ್ಭದಲ್ಲಿ ಮಕ್ಕಳಿಗೆ ತರಗತಿವಾರು ಅತೀ ಹೆಚ್ಚು ಅಂಕ ಪಡೆದ ಮತ್ತು ಉತ್ತಮ ಹಾಜರಾತಿ ಹೊಂದಿದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು.

ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಅಧ್ಯಕ್ಷರಾದ ನಿಂಗಣ್ಣ ಸಿದ್ದಗಿರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ಎಸ್.ಎಂ.ಬೆಂಚಿಕೇರಿ, ಸಿ.ಆರ್.ಪಿ ಶಿವಯೋಗಿ ಜಂಗಣ್ಣವರ, ಶ್ರೀನಿವಾಸ ಅಮಾತ್ಯೆನ್ನವರ, ಎಂ. ಎನ್ ವಗ್ಗರ, ಬಿ ಕೆ ಹಾಲವರ, ಸರಸ್ವತಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಬಿ.ಜಿ ಬಿಲ್ ಶಿವಣ್ಣವರ, ಸಂಸ್ಥಾಪಕ ಕಾರ್ಯದರ್ಶಿ ಬಿ.ಎಸ್ ಕುರುಬರ, ಶಾಲೆಯ ಮುಖ್ಯ ಶಿಕ್ಷಕಿ ನೀಲಾ ಕುರುಬರ ಸಹ ಶಿಕ್ಷಕ ಅನಿಲ ಕೊಣ್ಣೂರ, ಸಹ ಶಿಕ್ಷಕಿ ಮಂಜುಳಾ ಲಿಂಗದಾಳ, ಭುವನೇಶ್ವರಿ ಇನಾಮತಿ, ಫರ್ಜಾನ ನದಾಫ್, ಸಂಗೀತಾ ಮಂಟೂರ, ವಿನೋದಾ ಕುರಟ್ಟಿ, ಮಹೇಶ ಲಕ್ಕುಂಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು…

Leave a Reply

Your email address will not be published. Required fields are marked *