ಬೈಕ್ ಸ್ಕಿಡ್ ಆಗಿ ಗಟಾರಕ್ಕೆ ಬಿದ್ದ ಸವಾರ ಸಾವು: ಹರ್ಲಾಪುರ ಗ್ರಾಮದ ಬಳಿ ದುರ್ಘಟನೆ

Spread the love

ಕುಂದಗೋಳ: ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದಾಗಿ ಮೋಟಾರು ಸೈಕಲ್ ಸ್ಕಿಡ್ ಆಗಿ ಗಟಾರಕ್ಕೆ ಬಿದ್ದ ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ತಾಲ್ಲೂಕಿನ ಹರ್ಲಾಪುರ ಗ್ರಾಮದ ಬಳಿ ಸಂಭವಿಸಿದೆ.

​ಹರ್ಲಾಪುರ ಗ್ರಾಮದ ಬಸವರಾಜ ಗಂಗಪ್ಪ ಕೊರಡೂರ (23) ಮೃತಪಟ್ಟ ದುರ್ದೈವಿ. ಡಿ. 16 ರಂದು ರಾತ್ರಿ 10:30 ಗಂಟೆಯ ಸುಮಾರಿಗೆ ಬಸವರಾಜ ತನ್ನ ಮೋಟಾರು ಸೈಕಲ್ (ನಂ: KA-25/EA-7709) ಮೇಲೆ ಹರ್ಲಾಪುರ-ಸುಲ್ತಾನಪುರ ರಸ್ತೆಯಲ್ಲಿ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಹರ್ಲಾಪುರ ಕ್ರಾಸ್ ಕಡೆಯಿಂದ ಅತೀ ವೇಗವಾಗಿ ಬಂದ ಸವಾರ, ಹಾಲಿನ ಡೈರಿ ಸಮೀಪ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗಟಾರಕ್ಕೆ ಬಿದ್ದಿದ್ದ ಎನ್ನಲಾಗಿದೆ.

​ಘಟನೆಯಲ್ಲಿ ತೀವ್ರವಾಗಿ ಒಳಪೆಟ್ಟು ಮಾಡಿಕೊಂಡಿದ್ದ ಬಸವರಾಜನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಡಿ. 18 ರಂದು ಬೆಳಗಿನ ಜಾವ 3:00 ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಮೃತನ ತಂದೆ ಗದಿಗೆಪ್ಪ ನಾಗಪ್ಪ ಕೊರಡೂರ ಅವರು ನೀಡಿದ ದೂರಿನನ್ವಯ ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *