ನಾಳೆ ನಾಗನೂರಿನಲ್ಲಿ ಸದ್ಗುರು ಶ್ರೀ ಆತ್ಮಾನಂದ ಸ್ವಾಮೀಜಿಯವರ 43ನೇ ಪುಣ್ಯ ಸ್ಮರಣೋತ್ಸವ

Spread the love

ನವಲಗುಂದ: ತಾಲ್ಲೂಕಿನ ನಾಗನೂರ ಗ್ರಾಮದ ಜಗದ್ಗುರು ಶ್ರೀ ಶಿವಾನಂದ ಮಠದಲ್ಲಿ ಸದ್ಗುರು ಶ್ರೀ ಗುರುದೇವ ಆತ್ಮಾನಂದ ಸ್ವಾಮಿಗಳ 43ನೇ ವರ್ಷದ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವನ್ನು ಡಿಸೆಂಬರ್ 19ರ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದೆ.

​ಸದ್ಗುರು ಶ್ರೀ ಗುರುದೇವ ಆತ್ಮಾನಂದ ಸ್ವಾಮಿಗಳು ಲಿಂಗೈಕ್ಯರಾದ ನೆನಪಿಗಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಗದ್ಗುರು ಶ್ರೀ ಸಮರ್ಥ ಶಿವಾನಂದ ಮಹಾಸ್ವಾಮಿಗಳು ವಹಿಸಲಿದ್ದು, ಭಕ್ತಾದಿಗಳಿಗೆ ಆಶೀರ್ವಚನ ನೀಡಲಿದ್ದಾರೆ. ಪರಮಪೂಜ್ಯ ಶೋ.ಬ್ರ ಶ್ರೀ ಬಸವರಾಜ ಪಂಡಿತರಿಂದ ಆಧ್ಯಾತ್ಮಿಕ ಪ್ರವಚನ ಜರುಗಲಿದೆ.

​ಇದೇ ಸಂದರ್ಭದಲ್ಲಿ ಶ್ರೀ ಆತ್ಮಾನಂದ ಸ್ವಾಮೀಜಿಯವರ ತತ್ವ ಚಿಂತನಗೋಷ್ಠಿ ನಡೆಯಲಿದ್ದು, ಈರಣ್ಣ ಸತ್ಯಣ್ಣವರ, ಹನುಮಂತಣ್ಣ ರಾಮಣ್ಣವರ, ಬಸಮ್ಮ ತಾಯಿ ಮಲ್ಲಿಗವಾಡ, ಮಲ್ಲಪ್ಪ ಸಂಕದ ಹಾಗೂ ಉಮೇಶ ಬ. ಕೆಂಚರೆಡ್ಡಿ ಅವರು ಸ್ವಾಮೀಜಿಯವರ ಜೀವನ ದರ್ಶನ ಮತ್ತು ತತ್ವಗಳ ಕುರಿತು ವಿಚಾರ ಮಂಡಿಸಲಿದ್ದಾರೆ.

​ಸಾಯಂಕಾಲ ಕಾರ್ಯಕ್ರಮದ ಸಮಾರೋಪದ ನಂತರ ಮಠದ ವತಿಯಿಂದ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ನಾಗನೂರ ಹಾಗೂ ಸುತ್ತಮುತ್ತಲ ಗ್ರಾಮಗಳ ಸಕಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುವಿನ ಕೃಪೆಗೆ ಪಾತ್ರರಾಗಬೇಕೆಂದು ಮಠದ ಪ್ರಕಟಣೆ ಕೋರಿದೆ.

Leave a Reply

Your email address will not be published. Required fields are marked *