​ತೋಟಗಾರಿಕೆ ಇಲಾಖೆ: ಪ್ಲಾಸ್ಟಿಕ್ ಕ್ರೇಟ್ಸ್ ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನ

Spread the love

ಧಾರವಾಡ: ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರಿಗೆ ಬೆಂಬಲ ನೀಡುವ ಉದ್ದೇಶದಿಂದ, ಧಾರವಾಡ ತಾಲ್ಲೂಕಿನ ತೋಟಗಾರಿಕೆ ಇಲಾಖೆಯು 2025-26ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY) ಅಡಿಯಲ್ಲಿ ರಿಯಾಯಿತಿ ದರದಲ್ಲಿ ಪ್ಲಾಸ್ಟಿಕ್ ಕ್ರೇಟ್ಸ್ ವಿತರಿಸಲು ಮುಂದಾಗಿದೆ.

ಶೇ. 50 ರಷ್ಟು ಸಹಾಯಧನ:

ಈ ಯೋಜನೆಯಡಿ ಅರ್ಹ ರೈತರಿಗೆ ಪ್ಲಾಸ್ಟಿಕ್ ಕ್ರೇಟ್ಸ್‌ಗಳ ಖರೀದಿಗೆ ಶೇ. 50 ರಷ್ಟು ಸಹಾಯಧನ ನೀಡಲಾಗುವುದು. ಕೊಯ್ಲಿನ ನಂತರದ ನಷ್ಟವನ್ನು ಕಡಿಮೆ ಮಾಡಲು ಮತ್ತು ತರಕಾರಿ/ಹಣ್ಣುಗಳ ಸುಲಭ ಸಾಗಾಣಿಕೆಗಾಗಿ ಈ ಸೌಲಭ್ಯವನ್ನು ಒದಗಿಸಲಾಗುತ್ತಿದೆ.

ಅರ್ಜಿ ಸಲ್ಲಿಕೆ ಹೇಗೆ?

ಆಸಕ್ತ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದ (RSK) ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಧಾರವಾಡದ ತೋಟಗಾರಿಕೆ ಕಚೇರಿಗೆ ಸಲ್ಲಿಸಬೇಕೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪರ್ಕಿಸಬೇಕಾದ ಅಧಿಕಾರಿಗಳ ವಿವರ:

ಹೆಚ್ಚಿನ ವಿವರಗಳಿಗಾಗಿ ರೈತರು ಈ ಕೆಳಗಿನ ಅಧಿಕಾರಿಗಳನ್ನು ಅಥವಾ ಕಚೇರಿಯನ್ನು ಸಂಪರ್ಕಿಸಬಹುದು:

  • ಧಾರವಾಡ ಕಚೇರಿ: 0836-2744376
  • ಯುಗೇಂದ್ರ ಕೆ (ಅಮ್ಮಿನಬಾವಿ): 6366207155
  • ಶಿವಾನಂದ ಸಂಶುದ್ದಿ (ಗರಗ): 7411342383
  • ಮಹಾಂತೇಶ ಯಮಕನಮರಡಿ (ಧಾರವಾಡ): 8310143782
  • ಶಿವರಾಜ ಸತ್ತಿಗೇರಿ (ಅಳ್ನಾವರ): 9353895519

Leave a Reply

Your email address will not be published. Required fields are marked *