ಅತಿ ಮಳೆಯಿಂದ ಹೆಸರು ಬೆಳೆ ಹಾನಿ: ರೈತರಿಗೆ ಬೆಳೆವಿಮೆ ತುಂಬಿದ ಅರ್ಜಿ ಗಳನ್ನು ವೀಮಾ ಕಂಪನಿಯ ಪ್ರತಿನಿಧಿಗಳಿಗೆ ಸಲ್ಲಿಸಲು ಸೂಚನೆ

Spread the love

ಕುಂದಗೋಳ: ಪ್ರಸಕ್ತ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿಯಾದ ಮಳೆಯಿಂದಾಗಿ ಕುಂದಗೋಳ ತಾಲ್ಲೂಕಿನಲ್ಲಿ ಪ್ರಮುಖ ಬೆಳೆಯಾದ ಹೆಸರು (Green Gram) ಹಾನಿಗೊಳಗಾಗಿದೆ. ಈ ಹಿನ್ನೆಲೆಯಲ್ಲಿ, ಹೆಸರು ಬೆಳೆಗೆ ಬೆಳೆ ವಿಮೆ ನೋಂದಾಯಿಸಿರುವ ರೈತರು, ಕೂಡಲೇ ವಿಮಾ ಕಂಪನಿ ಪ್ರತಿನಿಧಿಗಳಿಗೆ ತಮ್ಮ ಅರ್ಜಿಗಳನ್ನು ಹಾಗೂ ಬೆಳೆ ವಿಮೆ ತುಂಬಿದ ರಷಿದಿಯೊಂದಿಗೆ ಸಲ್ಲಿಸುವಂತೆ ಸಹಾಯಕ ಕೃಷಿ ನಿರ್ದೇಶಕಿ ಭಾರತಿ ಮೆಣಸಿನಕಾಯಿ ಯವರು ತಿಳಿಸಿದ್ದಾರೆ.

ಬೆಳೆ ಹಾನಿಯಾಗಿರುವ ರೈತರು, ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ (AIC) ಪ್ರತಿನಿಧಿಗಳನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಸಂಶಿ ಹೋಬಳಿಯ ರೈತರು ಆದರ್ಶ (ಮೊ.ಸಂಖ್ಯೆ: 7022159476) ಅವರನ್ನು ಹಾಗೂ ಕುಂದಗೋಳ ಹೋಬಳಿಯ ರೈತರು ರಮೇಶ್ (ಮೊ.ಸಂಖ್ಯೆ: 7259182711) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರೈತರು ಹಾನಿಗೊಳಗಾದ ತಮ್ಮ ಬೆಳೆಗಳಿಗೆ ಪರಿಹಾರ ಪಡೆಯಲು ವಿಳಂಬ ಮಾಡದೆ ವಿಮಾ ಕಂಪನಿಯ ಪ್ರತಿನಿಧಿಗಳೊಂದಿಗೆ ಸಂಪರ್ಕ ಸಾಧಿಸಿ, ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *