ಧಾರವಾಡ: ನವಲಗುಂದ ಪಟ್ಟಣದ ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳು ಅಥವಾ ಸಮುದಾಯದ ನಾಯಿಗಳನ್ನು ದತ್ತು ಪಡೆಯಲು ಆಸಕ್ತ ನಾಗರಿಕರು, ಎನ್‌ಜಿಒ ಸಂಸ್ಥೆಗಳು ಮತ್ತು ಪ್ರಾಣಿ ಪ್ರಿಯರಿಗೆ ನವಲಗುಂದ ಪುರಸಭೆಯು ಕರೆ ನೀಡಿದೆ.
ಸರ್ವೋಚ್ಚ ನ್ಯಾಯಾಲಯದ ನವದೆಹಲಿಯ ಆದೇಶದ (SUO MOTO WRIT PETITION(CIVIL)) ಅನ್ವಯ ಈ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಾಣಿಗಳಿಗೆ ವಾಸಸ್ಥಾನ ನೀಡುವ ಈ ಮಹತ್ವದ ಅವಕಾಶವನ್ನು ಬಳಸಿಕೊಳ್ಳುವಂತೆ ಪುರಸಭೆ ಮನವಿ ಮಾಡಿದೆ.
ಈ ಪ್ರಕಟಣೆಯನ್ನು ನವಲಗುಂದ ಪುರಸಭೆಯು ಪ್ರಾಣಿ ದಯಾ ಸಂಘದ ಸಹಯೋಗದೊಂದಿಗೆ ನೀಡಿದೆ. ಬೀದಿ ನಾಯಿಗಳ ಹಿತ ಚಿಂತನೆಯನ್ನು ಸಾಧಿಸುವುದು ಈ ಪ್ರಕಟಣೆಯ ಮುಖ್ಯ ಉದ್ದೇಶವಾಗಿದೆ ಎಂದು ಪುರಸಭೆ ತಿಳಿಸಿದೆ.
ಹೆಚ್ಚಿನ ಮಾಹಿತಿ, ವಿವರ ಹಾಗೂ ಷರತ್ತುಗಳಿಗಾಗಿ ಆಸಕ್ತರು www.http://navalgundtown.mrc.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅಲ್ಲದೆ, ಕಚೇರಿ ವೇಳೆಯಲ್ಲಿ ನವಲಗುಂದ ಪುರಸಭೆಯ ಆರೋಗ್ಯ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ನವಲಗುಂದ ಪುರಸಭೆಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

