ಧಾರವಾಡ ನ.19: ಮಲಪ್ರಭಾ ಯೋಜನಾ ವಲಯದಡಿಯಲ್ಲಿ ಬರುವ ರೇಣುಕಾ ಸಾಗರ ಜಲಾಶಯ ನವಿಲುತೀರ್ಥದಿಂದ ನವೆಂಬರ್ 11, 2025ರಿಂದ ಮಲಪ್ರಭಾ ಬಲದಂಡೆ ಕಾಲುವೆ, ನರಗುಂದ ಶಾಖಾ ಕಾಲುವೆ, ಕೊಳಚಿ ಬಲದಂಡೆ ಕಾಲುವೆ ಹಾಗೂ ಏತ ನೀರಾವರಿ ಯೋಜನೆಗಳ ಮೂಲಕ ಕೃಷಿ ಉದ್ದೇಶಕ್ಕಾಗಿ ನೀರು ಹರಿಸಲಾಗುತ್ತಿದೆ.
ಅಚ್ಚುಕಟ್ಟು ಪ್ರದೇಶದ ರೈತರು ಲಘು ನೀರಾವರಿ ಬೆಳೆಗಳನ್ನು ಮಾತ್ರ (ತಮ್ಮ ಕ್ಷೇತ್ರದ 60 ಪ್ರತಿಶತ ಭಾಗದಲ್ಲಿ) ಬೆಳೆಸಲು ಹಾಗೂ ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸಲು ಸೂಚಿಸಲಾಗಿದೆ. ಜೊತೆಗೆ, ಮುಖ್ಯ ಕಾಲುವೆ ದಡದಲ್ಲಿ ಈಜಾಡಲು, ದನ-ಕರುಗಳ ಮೈ ತೊಳೆಯಲು ಇತ್ಯಾದಿ ಕಾರ್ಯಗಳಿಗೆ ಸಾರ್ವಜನಿಕರು ತೆರಳುವುದರಿಂದ ಅನಾಹುತಗಳು ಸಂಭವಿಸಿರುವ ಹಿನ್ನೆಲೆಯಲ್ಲಿ, ಈ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.
ಸಾರ್ವಜನಿಕರು ಮಲಪ್ರಭಾ ಯೋಜನೆಯ ನಿಗಮದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸಹಕಾರ ನೀಡಬೇಕು ಎಂದು ಮಲಪ್ರಭಾ ಬಲದಂಡೆ ಕಾಲುವೆ ವೃತ್ತದ ಸೂಪರಿಂಟೆಂಡಿಂಗ್ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

