ಜೇನು ಕೃಷಿ ತರಬೇತಿಗೆ ನೋಂದಣಿ ಪ್ರಾರಂಭ: ನ. 14 ರಂದು ತರಬೇತಿ ಕಾರ್ಯಕ್ರಮ

Spread the love

ಧಾರವಾಡ : ನ. 07: ರೈತರ ಸರ್ವತೋಮುಖ ಅಭಿವೃದ್ಧಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ, ಧಾರವಾಡ ಮತ್ತು ಪ್ರಾದೇಶಿಕ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣೆ ಕೇಂದ್ರ (ಕುಂಬಾಪೂರ ಫಾರ್ಮ) ಇವರ ಸಹಯೋಗದೊಂದಿಗೆ ಜೇನು ಕೃಷಿಯ ಕುರಿತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ತರಬೇತಿಯು ನವೆಂಬರ್ 14, 2025 ರಂದು ನಡೆಯಲಿದೆ.

​ಈ ತರಬೇತಿ ಕಾರ್ಯಕ್ರಮದಲ್ಲಿ ವೈಜ್ಞಾನಿಕ ಜೇನು ಸಾಕಾಣಿಕೆ ವಿಧಾನಗಳು, ಜೇನಿನ ವಿವಿಧ ಉತ್ಪನ್ನಗಳು, ರಾಣಿ ಕಣಗಳ ಉತ್ಪಾದನೆ, ಕೃಷಿ ಇಳುವರಿ ಹೆಚ್ಚಿಸುವಲ್ಲಿ ಜೇನು ನೊಣಗಳ ಪಾತ್ರ, ಸ್ಥಳಾಂತರ ಜೇನು ಕೃಷಿ ಮತ್ತು ಜೇನಿನ ಶತ್ರುಗಳ ನಿರ್ವಹಣೆಯ ಕುರಿತು ವಿವರವಾದ ಮಾಹಿತಿಯನ್ನು ನೀಡಲಾಗುತ್ತದೆ. ಅಲ್ಲದೆ, ಜೇನು ಸಾಕಾಣಿಕೆಯ ಪ್ರಾತ್ಯಕ್ಷಿಕೆಯನ್ನು ಅಳ್ನಾವರದ ಮಧುವನ ಕೇಂದ್ರದಲ್ಲಿ ನೀಡಲಾಗುವುದು.

​ತರಬೇತಿಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವ ರೈತರು ನವೆಂಬರ್ 12, 2025 ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನೋಂದಣಿಗಾಗಿ ಮೊಬೈಲ್ ಸಂಖ್ಯೆ: 9353895519 ಗೆ ಸಂಪರ್ಕಿಸಬಹುದು ಎಂದು ಸಹಾಯಕ ತೋಟಗಾರಿಕೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *