ಧಾರವಾಡ (ಅ. 30): ಕೇಂದ್ರ ಪುರಸ್ಕೃತ ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ಧಾರವಾಡ ತಾಲೂಕಿನಲ್ಲಿ ಸಾವಯವ ಕೃಷಿಗೆ ಉತ್ತೇಜನ ನೀಡಲು ತೋಟಗಾರಿಕೆ ಇಲಾಖೆ ಮಹತ್ವದ ಹೆಜ್ಜೆಯನ್ನಿಟ್ಟಿದೆ. 2025-26ನೇ ಸಾಲಿಗೆ ಗುಚ್ಛ ಮಾದರಿಯಲ್ಲಿ (Cluster Model) ಮಾವು ಬೆಳೆಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಇಮ್ತಿಯಾಜ್ ಚಂಗಾಪುರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮತ್ತು ಸಂಪರ್ಕ ಮಾಹಿತಿ
ಕೃಷಿ ವಿಕಾಸ ಯೋಜನೆಯಡಿ ಸಾವಯವ ಮಾವು ಕೃಷಿ ಕೈಗೊಳ್ಳಲು ಆಸಕ್ತಿಯುಳ್ಳ ರೈತರು ತಡಮಾಡದೆ ಅರ್ಜಿ ಸಲ್ಲಿಸಬಹುದು. ಅರ್ಹ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ, ಅಲ್ಲಿಂದ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಧಾರವಾಡ ತೋಟಗಾರಿಕೆ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿ ಹಾಗೂ ಮಾರ್ಗದರ್ಶನಕ್ಕಾಗಿ ರೈತರು ಕಚೇರಿ ದೂರವಾಣಿ ಸಂಖ್ಯೆ 0836-2744376 ಗೆ ಕರೆ ಮಾಡಬಹುದು. ಅಲ್ಲದೆ, ರೈತ ಸಂಪರ್ಕ ಕೇಂದ್ರಗಳಾದ ಅಮ್ಮಿನಬಾವಿಯ ಯುಗೇಂದ್ರ ಕೆ. (6366207155), ಗರಗಿನ ಶಿವಾನಂದ ಸಂಶುದ್ದಿ (7411342383), ಧಾರವಾಡದ ಮಹಾಂತೇಶ ಯಮಕನಮರಡಿ (8310143782) ಹಾಗೂ ಅಳ್ನಾವರದ ಶಿವರಾಜ ಸತ್ತಿಗೇರಿ (9353895519) ಅವರನ್ನೂ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

