ನವಲಗುಂದದ ತಡಹಾಳ ಗ್ರಾಮದಲ್ಲಿ ನೂತನ ಭಾರತ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರ ಶಾಸಕ ಎನ್ ಎಚ ಕೊನರಡ್ಡಿಯವರಿಂದ ಲೋಕಾರ್ಪಣೆ

Spread the love

ನವಲಗುಂದ: ತಾಲ್ಲೂಕಿನ ತಡಹಾಳ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮಹಾತ್ಮ ಗಾಂಧಿ ನರೇಗಾ) ಅಡಿಯಲ್ಲಿ ನಿರ್ಮಾಣವಾದ ನೂತನ ಭಾರತ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರ ಮತ್ತು ಗ್ರಾಮ ಪಂಚಾಯತ್ ಕಾರ್ಯಾಲಯದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿತು.

ಗದಗ ಶಿವಾನಂದ ಮಠದ ಪೂಜ್ಯಶ್ರೀ ಜಗದ್ಗುರು ಅಭಿನವ ಶಿವಾನಂದ ಮಹಾಸ್ವಾಮಿಗಳು ಹಾಗೂ ಪೂಜ್ಯಶ್ರೀ ಸದ್ಗುರು ಸಮರ್ಥ ವಿಶ್ವರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಶಾಸಕ ಎನ್. ಹೆಚ್. ಕೋನರಡ್ಡಿ ಅವರು ಈ ನೂತನ ಸೇವಾ ಕೇಂದ್ರವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಹಗೀರದಾರ, ಸಹಾಯಕ ನಿರ್ದೇಶಕ ಜಗದೀಶ ಹಡಪದ, ಗ್ರಾಮ ಪಂಚಾಯತ್ ಅಧ್ಯಕ್ಷ ನಿಂಗನಗೌಡ ಈಶ್ವರಗೌಡ ಗೌಡಪ್ಪಗೌಡ್ರ, ಉಪಾಧ್ಯಕ್ಷೆ ದ್ಯಾಮವ್ವ ಸಂ. ಪಿಡ್ಡಣ್ಣವರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಹಿರಿಯರಾದ ಮಲ್ಲನಗೌಡ ಚನ್ನವೀರಗೌಡ್ರ, ಶಿವನಗೌಡ್ರ ಕೊಂಗವಾಡ, ನಿಂಗಪ್ಪ ಮರಿನಾಯ್ಕರ, ಮಾನಪ್ಪ ಬಡಿಗೇರ, ಭೀಮನಗೌಡ ರಾಟಿ, ಸತೀಶ ಮಮಟಗೇರಿ, ಬಿ. ಕೆ. ಮಣ್ಣೂರ, ಸಿದ್ಧಣ್ಣ ಕಿಟಗೇರಿ, ಬಸವಂತಪ್ಪ ವಿ. ಕಿರಟಗೇರಿ, ಪ್ರಕಾಶ ಮಾದರ, ದಾವಲಸಾಬ ಖುದ್ದಣ್ಣವರ, ಪ್ರಕಾಶ ಶಿಗ್ಲಿ ಮತ್ತು ಪಿಡಿಒ ಮಹೆಬೂಬಭಾಷಾ ರಗಟಿ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸ್ಥಳೀಯ ಮುಖಂಡರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಈ ನೂತನ ಕಟ್ಟಡದಿಂದ ಗ್ರಾಮಸ್ಥರಿಗೆ ಪಂಚಾಯತ್‌ನ ಸೇವೆಗಳು ಇನ್ನಷ್ಟು ಸುಲಭವಾಗಿ ಮತ್ತು ಕ್ಷಿಪ್ರವಾಗಿ ಲಭ್ಯವಾಗಲಿವೆ ಎಂದು ಸಮಾರಂಭದಲ್ಲಿ ಆಶಿಸಲಾಯಿತು.

Leave a Reply

Your email address will not be published. Required fields are marked *