
ಕುಂದಗೋಳ: ಪ್ರತಿಭಾವಂತ ಚುಟುಕು ಕವಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಕುಂದಗೋಳ ತಾಲ್ಲೂಕು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ಕ.ಚು.ಸಾ.ಪ.) ವತಿಯಿಂದ ಧಾರವಾಡ ಜಿಲ್ಲಾ ಮಟ್ಟದ ಚುಟುಕು ಕವನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಆಸಕ್ತ ಕವಿಗಳು ತಮ್ಮ ಅಪ್ರಕಟಿತ ಹಾಗೂ ಸ್ವ-ರಚಿತ ಚುಟುಕುಗಳನ್ನು ಕಳುಹಿಸಿಕೊಡುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಲು ಪರಿಷತ್ತು ವಿನಂತಿಸಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಕವಿಗಳು ಎಲ್ಲಿಯೂ ಪ್ರಕಟವಾಗದ ತಮ್ಮದೇ ಸ್ವರಚಿತ 5 ಚುಟುಕುಗಳನ್ನು ಕಳುಹಿಸುವುದು ಕಡ್ಡಾಯವಾಗಿದೆ. ಕವನಗಳ ಜೊತೆಗೆ ಕವಿಯ ಭಾವಚಿತ್ರ ಹಾಗೂ ಸಂಪೂರ್ಣ ಸ್ವ-ವಿವರಗಳನ್ನು (ಬಯೋಡೇಟಾ) ಕಡ್ಡಾಯವಾಗಿ ಲಗತ್ತಿಸಬೇಕು.
ಕವನಗಳನ್ನು ಕಳುಹಿಸಲು ನವೆಂಬರ್ 01, 2025 ಅನ್ನು ಕೊನೆಯ ದಿನಾಂಕವಾಗಿ ನಿಗದಿಪಡಿಸಲಾಗಿದೆ. ಕವಿಗಳು ತಮ್ಮ ಚುಟುಕುಗಳನ್ನು ಅಂಚೆ ಮೂಲಕ, ಇ-ಮೇಲ್ ಮೂಲಕ ಇಲ್ಲವೇ ವಾಟ್ಸಪ್ ಮೂಲಕ ಕಳುಹಿಸಬಹುದಾಗಿದೆ.
ಚುಟುಕುಗಳನ್ನು ಕಳುಹಿಸಬೇಕಾದ ವಿಳಾಸ ಮತ್ತು ಸಂಪರ್ಕ ಮಾಹಿತಿ ಇಂತಿದೆ:
- ಅಂಚೆ ವಿಳಾಸ: ವೈ.ಡಿ.ಹೊಸೂರ, ಅಧ್ಯಕ್ಷರು, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು, “ಮನದ ಬಿಂಬ” ನಿವಾಸ, 1ನೇ ಅಡ್ಡ ರಸ್ತೆ, ಬೀಡನಾಳ ಪ್ಲಾಟ, ಲಕ್ಷ್ಮೇಶ್ವರ ರಸ್ತೆ, ಕುಂದಗೋಳ, ಜಿ:- ಧಾರವಾಡ-581113. (ದೂರವಾಣಿ: 9945971279)
- ಇ-ಮೇಲ್ ವಿಳಾಸ: ydhosur9gdt@gmail.com ಅಥವಾ basavarajguddadakeri@gmail.com
- ವಾಟ್ಸಪ್ ಸಂಖ್ಯೆಗಳು: 9945971279 ಅಥವಾ 9845899800
ಸ್ಪರ್ಧೆಯಲ್ಲಿ ಆಯ್ಕೆಯಾದ 5 ಕವಿಗಳ ಚುಟುಕುಗಳಿಗೆ ನವೆಂಬರ್ ತಿಂಗಳಲ್ಲಿ ಆಯೋಜಿಸುವ ಪರಿಷತ್ತಿನ ಕಾರ್ಯಕ್ರಮವೊಂದರಲ್ಲಿ ಬಹುಮಾನ ನೀಡಿ ಗೌರವಿಸಲಾಗುವುದು. ಅಷ್ಟೇ ಅಲ್ಲದೆ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಕವಿಗಳಿಗೂ ಪ್ರಶಸ್ತಿ ಪತ್ರವನ್ನು ವಿತರಿಸಲಾಗುವುದು ಎಂದು ಕುಂದಗೋಳ ಕ.ಚು.ಸಾ.ಪ.ದ ಪ್ರಧಾನ ಕಾರ್ಯದರ್ಶಿ ಬಸವರಾಜ ಗುಡ್ಡದಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

