

ಕುಂದಗೋಳ: ಮಹರ್ಷಿ ವಾಲ್ಮೀಕಿಯವರು ವಿಶ್ವ ಜಗತ್ತಿಗೆ ರಾಮಾಯಣದಂತಹ ಮಹಾನ್ ಗ್ರಂಥ ಕಾವ್ಯವನ್ನು ರಚಿಸಿಕೊಟ್ಟ ಅಪರೂಪದ ಸಾಹಿತಿ ಎಂದು ಗ್ರಾಮ ಪಂಚಾಯತಿ ಸದಸ್ಯ ಎಚ್.ಎಸ್. ಲಕ್ಷ್ಮೇಶ್ವರ ಅಭಿಪ್ರಾಯಪಟ್ಟರು.
ತಾಲೂಕಿನ ಸಂಶಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಭವನದಲ್ಲಿ (ಮಂಗಳವಾರ) ವಿಶ್ವ ಪ್ರಸಿದ್ಧ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಜ್ಞಾನ ಶಿಕ್ಷಣದ ಕೊಡುಗೆ:
ಶ್ರೀ ಮಹರ್ಷಿ ವಾಲ್ಮೀಕಿಯವರು ನೀಡಿದ ಜ್ಞಾನ ಮತ್ತು ಶಿಕ್ಷಣದ ಕೊಡುಗೆಯನ್ನು ಸರ್ವ ಜನಾಂಗದವರು ಜಯಂತಿಯ ದಿನದಂದು ಸ್ಮರಿಸಬೇಕು. ರಾಮಾಯಣದ ಮೂಲಕ ಪುರುಷೋತ್ತಮ ಶ್ರೀರಾಮನ ಮಹತ್ವವನ್ನು ತಿಳಿಸಿದ ಮಹಾನ್ ಸಂತರು ವಾಲ್ಮೀಕಿ ಮಹರ್ಷಿಗಳು ಎಂದು ಲಕ್ಷ್ಮೇಶ್ವರ ಹೇಳಿದರು.
ನಂತರ, ಸಂಶಿ ವಲಯದ ಎಲ್.ಎಚ್.ವಿ. ಅಧಿಕಾರಿ ಎಂ.ಜಿ. ಭಟ್ ಅವರು ಮಹರ್ಷಿಗಳ ಜಯಂತಿಯ ಮಹತ್ವ ಮತ್ತು ರಾಮಾಯಣದ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಆರೋಗ್ಯ ಕೇಂದ್ರದ ಹಿರಿಯ ಸಿಬ್ಬಂದಿಗಳಾದ ನಾಗಮ್ಮ ಹರಕುಣಿ, ಕವಿತಾ ಕೆ.ಎಚ್., ಸುಜಾತ ಕಾಗದ, ಜಯಮ್ಮ, ವಿ. ನಾಗರಾಜ್ ನೇಕಾರ್, ಪರಮೇಶಪ್ಪ ಶಿವಳ್ಳಿ ಮೊದಲಾದವರು ಹಾಜರಿದ್ದರು.
ರೈತ ಸಂಪರ್ಕ ಕೇಂದ್ರದಲ್ಲೂ ಆಚರಣೆ
ಸ್ಥಳೀಯ ರೈತ ಸಂಪರ್ಕ ಕೇಂದ್ರದ ಸಭಾಭವನದಲ್ಲಿ ಕೂಡ ಮಂಗಳವಾರದಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮೂಲಕ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಯಾದ ಜಯರಾಮ್ ಎಂ.ಕೆ., ಕೇಂದ್ರದ ಸಹಾಯಕ ಸಿಬ್ಬಂದಿಗಳಾದ ಶಂಕರಗೌಡ ಜಿ. ನೆರ್ತಿ, ಗುರುನಾಥ್ ಆಡಿನ, ರವಿಚಂದ್ರ ಕಟಗಿ, ಪರಶುರಾಮ್ ಕಟಗಿ, ಚಿದಾನಂದ್ ಇಟಗಿ, ಎಲ್ಲಪ್ಪ ಆಡಿನ ಹಾಗೂ ಸ್ಥಳೀಯ ರೈತರು ಪಾಲ್ಗೊಂಡಿದ್ದರು.

