ವಾರ್ಡ್ ನಂ. 67ಕ್ಕೆ ನೂತನ ಕಸ ಸಂಗ್ರಹ ಟ್ರ್ಯಾಕ್ಟರ್; ಸಭಾ ನಾಯಕ ಶಿವು ಮೆಣಸಿನಕಾಯಿ ಅವರಿಂದ ಪೂಜೆ!

Spread the love

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 67ರಲ್ಲಿ ಮಹಾನಗರ ಪಾಲಿಕೆ ವತಿಯಿಂದ ಒದಗಿಸಲಾದ ನೂತನ ಕಸ ಸಂಗ್ರಹಿಸುವ ಟ್ರ್ಯಾಕ್ಟರ್‌ಗೆ ಪಾಲಿಕೆ ಸದಸ್ಯರು ಹಾಗೂ ಸಭಾ ನಾಯಕರಾದ ಶಿವು ಮೆಣಸಿನಕಾಯಿ ಅವರ ನೇತೃತ್ವದಲ್ಲಿ ಪೂಜೆ ಸಲ್ಲಿಸಿ, ಸೇವೆಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಭಾ ನಾಯಕ ಶಿವು ಮೆಣಸಿನಕಾಯಿ ಅವರು, ಮಹಾನಗರ ಪಾಲಿಕೆಯಿಂದ ನಮ್ಮ ವಾರ್ಡ್‌ಗೆ ಕಸ ಸಂಗ್ರಹಿಸುವ ನೂತನ ಟ್ರ್ಯಾಕ್ಟರ್ ಒದಗಿಸಿರುವುದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ವಿಶೇಷವಾಗಿ ನಮ್ಮ ವಾರ್ಡ್‌ನಲ್ಲಿ ಮಾರುಕಟ್ಟೆ ಪ್ರದೇಶ ಇರುವುದರಿಂದ ಪ್ರತಿನಿತ್ಯ ಹೆಚ್ಚಿನ ಪ್ರಮಾಣದಲ್ಲಿ ಕಸ ಸಂಗ್ರಹವಾಗುತ್ತದೆ. ಇದೀಗ ಟ್ರ್ಯಾಕ್ಟರ್ ಮೂಲಕ ಕಸ ಸಂಗ್ರಹಣೆ ಹಾಗೂ ವಿಲೇವಾರಿ ಕಾರ್ಯವನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು. ಈ ಸೌಲಭ್ಯ ಒದಗಿಸಿದ ಮಹಾನಗರ ಪಾಲಿಕೆ ಹಾಗೂ ಆಯುಕ್ತರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಾಲಿಕೆಯ ವಲಯ ಅಧಿಕಾರಿಗಳಾದ ಜಗದೀಶ ದೊಡ್ಡಮನಿ, ಕೆ.ಎಂ. ನದಾಫ್, ನೂರಂದಪ್ಪ ಭಜಂತ್ರಿ, ಮಂಜುನಾಥ ಕೆಂಪಣ್ಣನವರ, ಶ್ರೀ ವೀರಭದ್ರೇಶ್ವರ ದೇವಸ್ಥಾನದ ಅಧ್ಯಕ್ಷ ಶಂಕ್ರಪ್ಪ ಟೋಪಗಿ, ಮಹಾಲಿಂಗಪ್ಪ ಹರ್ತಿ, ರಾಜು ಕೋರ್ಯಾಣಮಠ, ಈರಯ್ಯ ಮುಳಗುಂದಮಠ, ಗುರು ಬನ್ನಿಕೊಪ್ಪ, ರವಿ ಅಣ್ಣಿಗೇರಿ, ಯೋಗೇಶ ಹರ್ತಿ, ನಿರ್ಮಲಾ ಟೋಪಗಿ, ಅನಿತಾ ಮಾತಾಡೆ, ಕಾರ್ತಿಕ ದೇವರಮನಿ ಸೇರಿದಂತೆ ಆನಂದ ಓಣಿಯ ಗುರುಹಿರಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *