ಹನೂರು: TVS ಮೋಟಾರ್ ಕಂಪನಿಯ ಮೈಸೂರು ವಿಭಾಗ ಹಾಗೂ ಚಾಮರಾಜನಗರ ಜಿಲ್ಲಾ ಮಟ್ಟದಲ್ಲಿ ಅತಿ ಹೆಚ್ಚು ಮೋಟಾರ್ ಸೈಕಲ್ಗಳನ್ನು ಮಾರಾಟ ಮಾಡಿದ ಸಾಧನೆಗಾಗಿ ಹನೂರಿನ ಭಾಷಾ TVS ಶೋರೂಂ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿದೆ. ಶೋರೂಂ ಮಾಲೀಕ ಜಾವೀದ್ ಅವರ ನೇತೃತ್ವದಲ್ಲಿ ಈ ಸಾಧನೆ ಮಾಡಿದ್ದು, ಮೈಸೂರು ವಿಭಾಗದಲ್ಲಿ ನಂಬರ್ 1 ಸ್ಥಾನ ಗಳಿಸಿರುವುದು ವಿಶೇಷವಾಗಿದೆ.
ಮೈಸೂರಿನಲ್ಲಿ ಇತ್ತೀಚೆಗೆ ನಡೆದ TVS ಮೋಟಾರ್ ಕಂಪನಿಯ ವಾರ್ಷಿಕ ಡೀಲರ್ಸ್ ಮೀಟ್ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕಂಪನಿಯ ಹಿರಿಯ ಅಧಿಕಾರಿಗಳು ಹನೂರು ಭಾಷಾ TVS ಶೋರೂಂ ಮಾಲೀಕ ಜಾವೀದ್ ಅವರಿಗೆ ಪ್ರಶಸ್ತಿ ನೀಡಿ ಅಭಿನಂದಿಸಿದರು.
ಕಳೆದ ಹಣಕಾಸು ವರ್ಷದಲ್ಲಿ ಚಾಮರಾಜನಗರ ಜಿಲ್ಲೆ ಸೇರಿದಂತೆ ಮೈಸೂರು ವಿಭಾಗದಲ್ಲೇ ಅತಿ ಹೆಚ್ಚು TVS ದ್ವಿಚಕ್ರ ವಾಹನಗಳನ್ನು ಗ್ರಾಹಕರಿಗೆ ಮಾರಾಟ ಮಾಡಿ ತಲುಪಿಸಿದ ಹಿನ್ನೆಲೆಯಲ್ಲಿ ಈ ಗೌರವ ಲಭಿಸಿದೆ. ಗ್ರಾಹಕರಿಗೆ ಗುಣಮಟ್ಟದ ಸೇವೆ, ಸುಲಭ ಸಾಲ ಸೌಲಭ್ಯ ಹಾಗೂ ಸಮಯಕ್ಕೆ ಸರಿಯಾಗಿ ವಾಹನಗಳ ಸರ್ವೀಸ್ ಒದಗಿಸುತ್ತಿರುವುದು ಈ ಸಾಧನೆಗೆ ಪ್ರಮುಖ ಕಾರಣವಾಗಿದೆ.
ಈ ಸಾಧನೆಗೆ ಸಂತಸ ವ್ಯಕ್ತಪಡಿಸಿರುವ ಶೋರೂಂ ಮಾಲೀಕ ಜಾವೀದ್, ತಮ್ಮ ಮೇಲಿನ ನಂಬಿಕೆ ಇಟ್ಟು ವಾಹನಗಳನ್ನು ಖರೀದಿಸಿದ ಗ್ರಾಹಕರು, ಶೋರೂಂನ ಸಿಬ್ಬಂದಿ ವರ್ಗ ಹಾಗೂ ಸಹಕಾರ ನೀಡಿದ TVS ಮೋಟಾರ್ ಕಂಪನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಇನ್ನಷ್ಟು ಸಾಧನೆ ಮಾಡಲು ಶ್ರಮಿಸುವುದಾಗಿ ತಿಳಿಸಿದ್ದಾರೆ.
ವರದಿ :ಕಾರ್ತಿಕ್ ಗೌಡ ಹನೂರು.

