ಧಾರವಾಡ ಜಿಲ್ಲಾ ಕಾಂಗ್ರೇಸ್ ಪ್ರಚಾರ ಸಮೀತಿ ಅಧ್ಯಕ್ಷ: ಚಂದ್ರಶೇಖರ ಜುಟ್ಟಲ್ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣು ವಿತರಣೆ

Spread the love

ಕುಂದಗೋಳ: ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಶ್ರೀ ಗೋವಿಂದಪ್ಪ.ಹ. ಜುಟ್ಟಲ್ ಪ್ರತಿಷ್ಠಾನದ ಸಂಸ್ಥಾಪಕರಾದ ಚಂದ್ರಶೇಖರ ಜುಟ್ಟಲ್ ಅವರ ಹುಟ್ಟುಹಬ್ಬವನ್ನು ಸಮಾಜ ಸೇವಾ ಕಾರ್ಯಗಳ ಮೂಲಕ ಶನಿವಾರದಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಶ್ರೀ ಗೋವಿಂದಪ್ಪ.ಹ. ಜುಟ್ಟಲ್ ಪ್ರತಿಷ್ಠಾನ ಹಾಗೂ ಸೇವಾ ಸಮಿತಿ, ಕಮಡೊಳ್ಳಿ ವತಿಯಿಂದ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಿಸಲಾಯಿತು. ಈ ಮೂಲಕ ರೋಗಿಗಳ ಮುಖದಲ್ಲಿ ಸಂತೋಷ ಮೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಯಿತು.

ಈ ಸಮಯದಲ್ಲಿ ಮಾತನಾಡಿದ ಬೆಟದೂರ ಗ್ರಾ.ಪಂ. ಅಧ್ಯಕ್ಷ ರಾಜು ದೊಡ್ಡಶಂಕರ, “ಚಂದ್ರಶೇಖರ ಜುಟ್ಟಲ್ ಅವರು ಸರಳ ಮತ್ತು ಸಜ್ಜನ ವ್ಯಕ್ತಿ. ಇಂತಹ ವ್ಯಕ್ತಿಯ ಹುಟ್ಟುಹಬ್ಬದ ನಿಮಿತ್ತ ರೋಗಿಗಳಿಗೆ ಹಣ್ಣುಗಳನ್ನು ವಿತರಿಸುತ್ತಿರುವುದು ನಮ್ಮೆಲ್ಲರ ಪುಣ್ಯ. ರೋಗಿಗಳ ನೋವಿಗೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯ. ಈ ಸೇವಾ ಕಾರ್ಯವು ರೋಗಿಗಳ ಮನಸ್ಸಿಗೆ ಸಮಾಧಾನ ತರಲಿ ಎಂದು ಹಾರೈಸಿದರು. ಸಮಾಜ ಸೇವೆಯೇ ನಮ್ಮ ಜುಟ್ಟಲ್ ಪ್ರತಿಷ್ಠಾನದ ಮೂಲ ಉದ್ದೇಶವಾಗಿದ್ದು, ಮುಂದಿನ ದಿನಗಳಲ್ಲೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ” ಎಂದು ತಿಳಿಸಿದರು.

ನಂತರ ಮಾತನಾಡಿದ ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಜುಟ್ಟಲ್ ಅವರು, “ಜುಟ್ಟಲ್ ಪ್ರತಿಷ್ಠಾನ ಸಮಿತಿ ವತಿಯಿಂದ ಇಂತಹ ಸಾಮಾಜಿಕ ಕೆಲಸಗಳನ್ನು ಹಮ್ಮಿಕೊಂಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ. ಈ ರೀತಿಯ ಸಾಮಾಜಿಕ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿ. ಬಡವರ ಸೇವೆಗೆ ಸದಾ ಈ ರೀತಿಯ ಕೆಲಸಗಳು ನಡೆಯಲಿ. ನನ್ನ ಹುಟ್ಟುಹಬ್ಬವನ್ನು ಇಂತಹ ಅರ್ಥಗರ್ಭಿತ ಕಾರ್ಯದ ಮೂಲಕ ಆಚರಿಸಿದ್ದಕ್ಕೆ ನನ್ನ ಅಭಿಮಾನಿಗಳ ಬಳಗಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುವೆ” ಎಂದು ಹೇಳಿದರು

ಈ ಕಾರ್ಯಕ್ರಮದಲ್ಲಿ ಶಂಕರಗೌಡ ಪಾಟೀಲ, ಜಗದೀಶ್ ಹಣಗಿ, ಶಂಭಯ್ಯಾ ನೀರಲಗಿ, ಕಾಂತೇಶ್ ದೊಡ್ಡಮನಿ, ಮಲ್ಲಿಕಾರ್ಜುನ ಬರದೇಲಿ, ಮುನ್ನಾ ದಂಡಿನ, ಮಹೇಶ ಕಣಕಣ್ಣವರ, ಖಲಂಧರಸಾಬ ಕಾಳಾ, ವೆಂಕಣ್ಣ ಸಂಶಿ ಸೇರಿದಂತೆ ಹಲವು ಯುವ ಮಿತ್ರರು ಮತ್ತು ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *