ಹಿರೇನರ್ತಿ ಗ್ರಾಮದಲ್ಲಿ ಜಾಗದ ಕಿರಿಕ್: ಕರಿಯಪ್ಪನ ಮೇಲೆ ಭೀಕರ ಹಲ್ಲೆ

Spread the love

ಕುಂದಗೋಳ: ತಾಲ್ಲೂಕಿನ ಹಿರೇನರ್ತಿ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ತಲೆದೋರಿದ ಹಳೆಯ ದ್ವೇಷವೊಂದು ವಿಕೋಪಕ್ಕೆ ತಿರುಗಿದ್ದು, ಒಂದೇ ಮನೆತನದವರ ನಡುವಿನ ಜಗಳದಲ್ಲಿ ಮುಂದುವರೆದು ಹಲ್ಲೆಯಲ್ಲಿ ಅಂತ್ಯಗೊಂಡಿದೆ. ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಈ ಭೀಕರ ಗಲಾಟೆಯಲ್ಲಿ ಕರಿಯಪ್ಪಗೌಡ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೋಮವಾರ ಮಧ್ಯಾಹ್ನದ ವೇಳೆಗೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿ. ಜಾಗದ ವಿಷಯವಾಗಿ ಮಾತಿಗೆ ಮಾತು ಬೆಳೆದು, ಒಂದೇ ಮನೆತನದ ಅಣ್ಣತಮ್ಮಂದಿರಾದ ಪ್ರಜ್ವಲ್ ಗೌಡ , ಸಿದ್ದನಗೌಡ ಹಾಗೂ ಶಿವನಗೌಡ (ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳು) ನಡುವೆ ಸಂಘರ್ಷ ಏರ್ಪಟ್ಟಿದೆ. ಕರಿಯಪ್ಪಗೌಡ ಅವರು ಬಣವೆ ಒಟ್ಟುತ್ತಿದ್ದ ಸಮಯದಲ್ಲಿ ಸ್ಥಳಕ್ಕೆ ಬಂದ ಪ್ರಜ್ವಲ್ ಗೌಡ ಹಾಗೂ ಆತನ ಸಹಚರರು, ಕಲ್ಲು ಮತ್ತು ಬಡಿಗೆಗಳಿಂದ ಏಕಾಏಕಿ ಅಟ್ಟಹಾಸ ಮೆರೆದಿದ್ದಾರೆ ಎಂದು ಸ್ವತಃ ಹಲ್ಲೆಗೊಳಗಾದ ಕರಿಯಪ್ಪಗೌಡರು ತಮ್ಮ ನೋವಿನ ಸಂಗತಿಯನ್ನು ಹೇಳಿಕೊಂಡಿದ್ದಾರೆ.

ಆರೋಪಿಗಳು ಕರಿಯಪ್ಪಗೌಡರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಪರಿಣಾಮ, ಅವರ ತಲೆ ಹಾಗೂ ಮೈಮೇಲೆ ರಕ್ತಸಿಕ್ತ ಗಾಯಗಳಾಗಿವೆ. ರಕ್ತದ ಘಾಯದಿಂದ ಬಿದ್ದಿದ್ದ ಅವರನ್ನು ಗ್ರಾಮಸ್ಥರು ಕೂಡಲೇ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಗಾಯಾಳು ಕರಿಯಪ್ಪಗೌಡರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು, ಸದ್ಯ ಕುಂದಗೋಳ ಪೋಲಿಸ್ ಠಾಣೆಯಲ್ಲಿ ವಿಚಾರಣೆ ನಡೆಯತ್ತಿದ್ದು ಇದು ಎಪ್ ಆಯ್ ಆರ್ ಆಗುತ್ತಾ ರಾಜಿ ಸಂಧಾನದ ಮೂಲಕ ಇಥ್ಯರ್ಥ ಆಗುತ್ತದೆಯಾ ಎಂದುದನ್ನು ಕಾದು ನೋಡಬೇಕು. ಘಟನೆಯಿಂದಾಗಿ ಗ್ರಾಮದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *