ಬಸವ ಧರ್ಮಪೀಠದ ಅಧ್ಯಕ್ಷರಾದ ಶ್ರೀಮನ್ನಿರಂಜನ ಮಹಾಜಗದ್ಗುರು ಡಾ. ಮಾತೆ ಗಂಗಾದೇವಿ ಮಾತಾಜಿ ಅವರ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ನಾಂದಿ ಪೂಜಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪೂಜ್ಯ ಜಗದ್ಗುರು ಬಸವಕುಮಾರ ಸ್ವಾಮೀಜಿ, ಪೂಜ್ಯ ಜಗದ್ಗುರು ಜ್ಞಾನೇಶ್ವರಿ ಮಾತಾಜಿ, ಪೂಜ್ಯ ಜಗದ್ಗುರು ದಾನೇಶ್ವರಿ ಮಾತಾಜಿ, ಮಾತೆ ವಿಜಯಾಂಬಿಕೆ, ಪೂಜ್ಯ ಅನಿಮಿಷಾನಂದ ಸ್ವಾಮೀಜಿ, ಪೂಜ್ಯ ಡಾ. ಬಸವ ಪ್ರಕಾಶ ಸ್ವಾಮೀಜಿ ಹಾಗೂ ಪೂಜ್ಯ ಅಕ್ಕನಾಗಲಾಂಬಿಕಾ ಮಾತಾಜಿ ಸೇರಿದಂತೆ ಬಸವ ಧರ್ಮಪೀಠದ ಸರ್ವ ಪೂಜ್ಯರು ಉಪಸ್ಥಿತರಿದ್ದು, ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಳವಳ್ಳಿ ಮಾದೇವಸ್ವಾಮಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಭಕ್ತರು ಭಾಗವಹಿಸಿ, ನೂತನ ಆಶ್ರಮದ ನಿರ್ಮಾಣ ಹಾಗೂ ಮುಂದಿನ ಕಾರ್ಯಗಳಿಗೆ ಶುಭ ಹಾರೈಸಿದರು.
ಮಲೆ ಮಹದೇಶ್ವರ ಬೆಟ್ಟದ ಪವಿತ್ರ ಪರಿಸರದಲ್ಲಿ ನಡೆದ ನಾಂದಿ ಪೂಜಾ ಕಾರ್ಯಕ್ರಮವು ಭಕ್ತಿಭಾವ ಹಾಗೂ ಆಧ್ಯಾತ್ಮಿಕ ವಾತಾವರಣಕ್ಕೆ ಸಾಕ್ಷಿಯಾಯಿತು.
ಮಲೆ ಮಹದೇಶ್ವರ ಬೆಟ್ಟದಲ್ಲಿ ಬಸವ ಧರ್ಮಪೀಠದ ನೂತನ ಆಶ್ರಮದ ನಾಂದಿ ಪೂಜೆ


