
ಧಾರವಾಡ: 110 ಕೆ.ವಿ. ಯುಎಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 22ರ ಸೋಮವಾರದಂದು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ (HESCOM) ಪ್ರಕಟಣೆ ತಿಳಿಸಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ಎತ್ತಿನಗುಡ್ಡ, ಅಗ್ರಿ ಯುನಿವರ್ಸಿಟಿ ಕ್ಯಾಂಪಸ್, ಕುಮಾರೇಶ್ವರ ನಗರ, ಸೈದಾಪುರ, ಬೆಳಗಾವಿ ಮೇನ್ರೋಡ್, ನಾರಾಯಣಪುರ, ಸಿ.ಐ.ಟಿ.ಬಿ., ಕೆ.ಹೆಚ್.ಬಿ. ಕಾಲೋನಿ, ಸಂಪಿಗೆ ನಗರ, ತಾವರಗೇರಿ ಆಸ್ಪತ್ರೆ, ಸನ್ಮತಿ ನಗರ, ಜಿ.ಟಿ.ಸಿ. ಕ್ಯಾಂಪಸ್, ಮೆಹಬೂಬ್ ನಗರ, ಹಶ್ಮಿ ನಗರ, ಮಾಳಾಪುರ, ಏರ್ಟೆಕ್, ಜಯಲಕ್ಷ್ಮೀ ಇಂಡಸ್ಟ್ರೀಸ್, ಬಸವ ಕಾಲೋನಿ, ಪವರ್ ಗ್ರಿಡ್, ಪೆಪ್ಸಿ, ಕಿಲ್ಲಾ, ಸಾಧುನವರ ಎಸ್ಟೇಟ್, ನರೇಂದ್ರ, ಮಮ್ಮಿಗಟ್ಟಿ, ಚಿಕ್ಕಮಲ್ಲಿಗವಾಡ, ಹಿರೇಮಲ್ಲಿಗವಾಡ, ಶಿರಡಿನಗರ, ತಾಜನಗರ, ಬಿ.ಎಸ್.ಕೆ. ಲೇಔಟ್, ಮಾಳಾಪುರ ಲಾಸ್ಟ್ ಬಸ್ಸ್ಟಾಪ್, ರಾಜನಗರ, ತಮದಂಡಿ ಪ್ಲಾಟ್, ಹರಿಜನಕೇರಿ, ಎಪಿಎಂಸಿ, ಫೈರ್ ಸ್ಟೇಷನ್, ರಾಮನಗೌಡ ಆಸ್ಪತ್ರೆ, ದುರ್ಗಾದೇವಿ ದೇವಸ್ಥಾನ, ಮರಾಠಾ ಕಾಲೋನಿ, ಕೊಪ್ಪದಕೇರಿ, ಗುಲಗಂಜಿಕೊಪ್ಪ, ಎಂ.ಬಿ. ನಗರ, ಸಿವಿಲ್ ಆಸ್ಪತ್ರೆ, ನಿತಿನ್ ನಗರ, ಓಲ್ಡ್ ಎಸ್.ಪಿ. ಸರ್ಕಲ್, ಲಕ್ಷ್ಮೀ ಗುಡಿ ಸುತ್ತಮುತ್ತಲಿನ ಪ್ರದೇಶಗಳು, ಪೊಲೀಸ್ ಹೆಡ್ಕ್ವಾರ್ಟರ್ಸ್, ಬೇಂದ್ರೆ ನಗರ, ಹಿರೇಮಠ ಲೇಔಟ್, ಐಶ್ವರ್ಯ ನ್ಯಾನೋಸಿಟಿ, ನಂದಿ ಹೈವೇ ಬೈಪಾಸ್, ಮಲ್ಲಿಗೆ ನಗರ, ಗುರುನಗರ, ಶ್ರೀಗುರು ನಗರ, ಕೆ.ಹೆಚ್.ಬಿ. ಲೇಔಟ್, ಮಲ್ಲಿಗವಾಡ, ಮೂಕಾಂಬಿಕ ನಗರ, ಗೌಸಿಯಾ ಟೌನ್, ಸುಂದರ್ ನಗರ, ಸೈನಿಕ್ ನಗರ, ಜೋಶಿ ಫಾರ್ಮ್ ಮತ್ತು ಮುಧೋಳ್ಕರ್ ಕಾಂಪೌಂಡ್ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

