ಮಕ್ಕಳನ್ನೇ ಜೋಡೆತ್ತುಗಳನ್ನಾಗಿ ಮಾಡಿಕೊಂಡ ರೈತ: ರಾಣೆಬೇನ್ನೂರ ತಾ: ವೆಂಕಟಾಪೂರದ ದೃಶ್ಯ ಸರ್ಕಾರದ ಕಣ್ಣು ತೆರೆಯಬೇಕಿದೆ
ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಆಗ್ರಹ ಹಾವೇರಿ: ಎಲೆಕೋಸು ಬೆಳೆಯ ಮಧ್ಯೆ ಬೆಳೆದ ಕಳೆ ನಾಶ ಮಾಡಲು ಇಬ್ಬರು ಪುಟ್ಟ ಮಕ್ಕಳು ಜೋಡೆತ್ತುಗಳಂತೆ ನೊಗ ಹೊತ್ತು ಹೊಲದಲ್ಲಿ ಸಾಗುತ್ತಿದ್ದರೆ, ಅವರ ಹಿಂದೆ ತಂದೆ ಎಡೆಕುಂಟೆ ಹಿಡಿದು ನಡೆಯುತ್ತಿರುವ ದೃಶ್ಯ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ವೆಂಕಟಾಪುರ ತಾಂಡಾದಲ್ಲಿ ಕಂಡುಬಂದಿದೆ. ಆಧುನಿಕ ಕೃಷಿ, ರೈತರ ಅಭಿವೃದ್ಧಿ ಮತ್ತು ಕೃಷಿ ಯಾಂತ್ರೀಕರಣದ ಬಗ್ಗೆ ಸರ್ಕಾರಗಳು ದೊಡ್ಡ ಮಟ್ಟದಲ್ಲಿ ಮಾತನಾಡುತ್ತಿರುವ ಈ ಕಾಲಘಟ್ಟದಲ್ಲಿಯೂ ರೈತ…

