ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಸಂವಿಧಾನಾತ್ಮಕ ಕರ್ತವ್ಯಗಳಿಗೆ ಪ್ರಥಮ ಆದ್ಯತೆ ನೀಡಿ: ಪ್ರಧಾನಿ ಮೋದಿ
ಸಂವಿಧಾನ ದಿನದಂದು ನಾಗರಿಕರಿಗೆ ಪತ್ರ; ಪ್ರಬಲ ಪ್ರಜಾಪ್ರಭುತ್ವಕ್ಕೆ ಮೂಲಾಧಾರವೇ ನಮ್ಮ ಕರ್ತವ್ಯಗಳು ನವದೆಹಲಿ: ನವೆಂಬರ್ 26: ಭಾರತದ ಸಂವಿಧಾನವನ್ನು ಅಂಗೀಕರಿಸಿದ ಐತಿಹಾಸಿಕ ದಿನವಾದ ಸಂವಿಧಾನ ದಿನಾಚರಣೆಯ (ನವೆಂಬರ್ 26) ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ಪತ್ರದ ಮೂಲಕ ಪ್ರಮುಖ ಸಂದೇಶ ನೀಡಿದ್ದಾರೆ. ಪ್ರಬಲ ಪ್ರಜಾಪ್ರಭುತ್ವವನ್ನು ಬಲಪಡಿಸಲು ನಾಗರಿಕರು ತಮ್ಮ ಸಂವಿಧಾನಾತ್ಮಕ ಕರ್ತವ್ಯಗಳಿಗೆ (ಡ್ಯೂಟೀಸ್) ಪ್ರಥಮ ಆದ್ಯತೆಯನ್ನು ನೀಡಬೇಕು ಎಂದು ಅವರು ಕರೆ ನೀಡಿದ್ದಾರೆ. ವಿಕಸಿತ ಭಾರತದ ಗುರಿ: ಸಂವಿಧಾನ ದಿನದ ಅಂಗವಾಗಿ ನೀಡಿದ…

