10 ಸಾವಿರ ರೂ.ಗಾಗಿ ಬಲಿಯಾದ ಬಿಸಿಎ ವಿದ್ಯಾರ್ಥಿನಿಯ ಜೀವ: ಶುಲ್ಕ ಪಾವತಿಸಲಾಗದೆ ಹಾಲ್ಟಿಕೆಟ್ ಸಿಗದೆ ಆತ್ಮಹತ್ಯೆ
ಭಟ್ಕಳ: ಕಾಲೇಜು ಶುಲ್ಕ ಪಾವತಿಸಲು ತಂದೆ ನೀಡಿದ್ದ 10 ಸಾವಿರ ರೂಪಾಯಿ ಹಣವನ್ನು ಪರಿಚಯಸ್ಥನಿಗೆ ಸಾಲವಾಗಿ ನೀಡಿ, ಆತ ಹಣವನ್ನು ಮರಳಿ ನೀಡದೆ ವಂಚಿಸಿದ ಹಿನ್ನೆಲೆಯಲ್ಲಿ ಮನನೊಂದ ಬಿಸಿಎ ವಿದ್ಯಾರ್ಥಿನಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದಲ್ಲಿ ಶನಿವಾರದಂದು ನಡೆದಿದೆ. ಭಟ್ಕಳದ ಖಾಸಗಿ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಗಾಯತ್ರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಗಾಯತ್ರಿಯ ತಂದೆ ನಾಗರಾಜ ಅವರು ಮಗಳ ಕಾಲೇಜು…

