“ಸಂಗಮ ಸಿರಿ” ರಾಜ್ಯಮಟ್ಟದ ಪ್ರಶಸ್ತಿ ಘೋಷಣೆ: ಡಾ. ಬಸವರಾಜ ಸಾದರ, ಡಾ. ಶಶಿಕಾಂತ್ ಪಟ್ಟಣ ಆಯ್ಕೆ
ಹುಬ್ಬಳ್ಳಿ (ಡಿ. 11): ಹಿರಿಯ ಸಾಹಿತಿ ಡಾ. ಸಂಗಮೇಶ ಹಂಡಿಗಿ ಅವರ ಸ್ಮರಣಾರ್ಥ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನವು ನೀಡುವ ಈ ವರ್ಷದ ರಾಜ್ಯಮಟ್ಟದ “ಸಂಗಮ ಸಿರಿ” ಪ್ರಶಸ್ತಿಗೆ ನಾಡಿನ ಹಿರಿಯ ಸಾಹಿತಿ ಡಾ. ಬಸವರಾಜ ಸಾದರ ಹಾಗೂ ಪುಣೆಯ ವಿಜ್ಞಾನಿ ಡಾ. ಶಶಿಕಾಂತ್ ಪಟ್ಟಣ ಅವರು ಆಯ್ಕೆಯಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ವಿವಿಧ ಸಾಹಿತ್ಯ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುತ್ತಿರುವ ಪ್ರತಿಷ್ಠಾನವು, ಈ ಬಾರಿ ವಚನ ಸಾಹಿತ್ಯ ಮತ್ತು ಶರಣ ಸಾಹಿತ್ಯ…

