ಬಗೆದಷ್ಟೂ ಬಯಲಾಗ್ತಿದೆ KPSC ಹಗರಣದ ಕರಾಳ ಮುಖ: ಪರೀಕ್ಷೆಯ ‘ಸ್ಟ್ರಾಂಗ್ ರೂಂ’ ಆಗಿತ್ತಾ ಕನ್ನಾಳೆ ಮನೆ?!
ಬೆಂಗಳೂರು: KPSC ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯ ಅಕ್ರಮದ ತನಿಖೆ ಚುರುಕುಗೊಂಡಿದ್ದು, ಸಿಐಡಿ ಅಧಿಕಾರಿಗಳ ವಿಚಾರಣೆ ವೇಳೆ ಒಂದೊಂದೇ ಬೆಚ್ಚಿಬೀಳಿಸುವ ಸತ್ಯಗಳು ಹೊರಬರುತ್ತಿವೆ. IAS ಅಧಿಕಾರಿ ಜ್ಞಾನೇಂದ್ರ ಬಂಧನದ ಬೆನ್ನಲ್ಲೇ, ಪ್ರಕರಣದ ಮತ್ತೊಬ್ಬ ಪ್ರಮುಖ ಕಿಂಗ್‌ಪಿನ್ ಬಸವರಾಜ್ ಕನ್ನಾಳೆ ಮತ್ತು ಆತನ ಜಾಲದ ಅಸಲಿ ಮುಖ ಬಯಲಾಗಿದೆ. ₹40 ಲಕ್ಷಕ್ಕೆ ಒಂದೊಂದು ಹುದ್ದೆ ಸೇಲ್! ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ ಬೆನ್ನಲ್ಲೇ ಬಲೆಗೆ ಬಿದ್ದಿರುವ ಅಭ್ಯರ್ಥಿಗಳು ಸತ್ಯ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಪಶುವೈದ್ಯಾಧಿಕಾರಿ ಹುದ್ದೆಗೆ ತಲಾ ₹30 ರಿಂದ…

