ರಸ್ತೆ ಅಭಿವೃದ್ಧಿ ವೇಳೆ ತೆರವುಗೊಳಿಸಿದ ‘ಶಿವಲಿಂಗಪ್ಪ ಅಗಡಿ ಮಾರ್ಗ’ ನಾಮಫಲಕ ಮರುಸ್ಥಾಪನೆಗೆ ಒತ್ತಾಯ

ಹುಬ್ಬಳ್ಳಿ, ಜ. 14: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ ದಿ. ಶಿವಲಿಂಗಪ್ಪ ಗುರುಸಿದ್ಧಪ್ಪ ಅಗಡಿ ಅವರ ಹೆಸರಿನ ರಸ್ತೆ ನಾಮಫಲಕಗಳನ್ನು, ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಶೀಘ್ರವಾಗಿ ಮರುಸ್ಥಾಪಿಸುವಂತೆ ಅಗಡಿ ಕುಟುಂಬಸ್ಥರು ಹಾಗೂ ವಾರ್ಡಿನ ನಾಗರಿಕರು ಮಹಾನಗರ ಪಾಲಿಕೆಗೆ ಒತ್ತಾಯಿಸಿದ್ದಾರೆ. ​ಈ ಕುರಿತು ಮೇಯರ್ ಹಾಗೂ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ ಅವರು, ಶಿವಲಿಂಗಪ್ಪ ಅಗಡಿ ಅವರು ಎರಡು ಅವಧಿಗೆ ಕಾರ್ಪೊರೇಟರ್ ಆಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಹಾಗೂ ಮೇಯರ್ ಆಗಿ ಸಲ್ಲಿಸಿದ ನಿಷ್ಠಾವಂತ ಸೇವೆಯನ್ನು…

Read More

ಹುಬ್ಬಳ್ಳಿ: ಹಳೆ ದ್ವೇಷಕ್ಕೆ ರಕ್ತಪಾತ: ಅಣ್ಣನಿಗೆ 7 ಬಾರಿ ಚಾಕು ಇರಿದು ಕೊಲೆಗೆ ಯತ್ನಿಸಿದ ತಮ್ಮ

​ಹುಬ್ಬಳ್ಳಿ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಸ್ವಂತ ತಮ್ಮನೇ ಅಣ್ಣನಿಗೆ ಚಾಕುವಿನಿಂದ ಮನಬಂದಂತೆ ಇರಿದು ಕೊಲೆಗೆ ಯತ್ನಿಸಿದ ಘೋರ ಘಟನೆ ನಗರದ ಹಳೆ ಹುಬ್ಬಳ್ಳಿಯ ಶಿವಶಂಕರ ಕಾಲೋನಿಯಲ್ಲಿ ನಡೆದಿದೆ. ​ಗಂಭೀರವಾಗಿ ಗಾಯಗೊಂಡವರನ್ನು ಮಲ್ಲೇಶ್ ಪೂಜಾರ (೪೨) ಎಂದು ಗುರುತಿಸಲಾಗಿದೆ. ಮಲ್ಲೇಶ್ ಅವರು ತಮ್ಮ ಮನೆಯ ಮುಂಭಾಗದಲ್ಲಿ ಮದ್ಯದ ಅಮಲಿನಲ್ಲಿ ಕುಳಿತಿದ್ದರು. ಈ ವೇಳೆ ಏಕಾಏಕಿ ಅಲ್ಲಿಗೆ ಬಂದ ಅವರ ಸಹೋದರ ಪ್ರದೀಪ್, ಹಳೆಯ ದ್ವೇಷದ ಕಾರಣಕ್ಕೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಪ್ರದೀಪ್ ತನ್ನ ಬಳಿಯಿದ್ದ ಚಾಕುವಿನಿಂದ…

Read More

ಹುಬ್ಬಳ್ಳಿಯಲ್ಲಿ ನರರೂಪಿ ರಾಕ್ಷಸರ ಕೃತ್ಯ: ಅಸಹಾಯಕ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ವಿಡಿಯೋ ವೈರಲ್! ಕಾಮುಕರ ಬಂಧನ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಅಮಾನವೀಯ ಹಾಗೂ ಭೀಭತ್ಸ ಘಟನೆ ಒಂದು ಬೆಳಕಿಗೆ ಬಂದಿದೆ. ಅಸಹಾಯಕ ಮಹಿಳೆಯೊಬ್ಬಳ ಮೇಲೆ ಇಬ್ಬರು ನರಾಧಮರು ಸಾಮೂಹಿಕ ಅತ್ಯಾಚಾರ ಎಸಗಿ, ಆ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಘೋರ ಪ್ರಕರಣ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ಶಿವಶಂಕರ ಕಾಲೋನಿಯ ನಿವಾಸಿಗಳಾದ ಶಿವಾನಂದ್ (29) ಹಾಗೂ ಗಣೇಶ್ ಗಿಡ್ಡಣ್ಣವರ (31) ಎಂದು ಗುರುತಿಸಲಾಗಿದೆ. ಹಾವೇರಿ…

Read More

ಹುಬ್ಬಳ್ಳಿ ಬಿಜೆಪಿ ಕಾರ್ಯಕರ್ತೆ ಮೇಲಿನ ದೌರ್ಜನ್ಯ ಪ್ರಕರಣ: ಕೇಶ್ವಾಪುರ ಇನ್‌ಸ್ಪೆಕ್ಟರ್ ಎತ್ತಂಗಡಿ

ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತೆ ಸುಜಾತ ಅವರಿಗೆ ಸಂಬಂಧಿಸಿದ ವಿವಸ್ತ್ರ ಪ್ರಕರಣ ಹಾಗೂ ಪೊಲೀಸ್ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಪೊಲೀಸ್ ಇಲಾಖೆಯು ಕಠಿಣ ಕ್ರಮಕ್ಕೆ ಮುಂದಾಗಿದೆ. ಕೇಶ್ವಾಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಸ್.ಕೆ. ಹಟ್ಟಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎತ್ತಂಗಡಿ ಮಾಡಲಾಗಿದೆ. ​ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಹೇಳಿದ ಆದೇಶನ್ವಯ ಎಸ್.ಕೆ. ಹಟ್ಟಿ ಅವರಿಗೆ ತಕ್ಷಣವೇ ಕಮಿಷನರ್ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಕೇಶ್ವಾಪುರ ಠಾಣೆಯ ತೆರವಾದ ಇನ್‌ಸ್ಪೆಕ್ಟರ್ ಸ್ಥಾನಕ್ಕೆ ಘಂಟಿಕೇರಿ ಪೊಲೀಸ್ ಇನ್‌ಸ್ಪೆಕ್ಟರ್…

Read More

​ಹುಬ್ಬಳ್ಳಿ ದೌರ್ಜನ್ಯ ಪ್ರಕರಣ: ರಾಷ್ಟ್ರೀಯ ಮಹಿಳಾ ಆಯೋಗ ಎಂಟ್ರಿ; ಕಾಂಗ್ರೆಸ್ ನಾಯಕಿ ಸೇರಿ 9 ಮಂದಿ ವಿರುದ್ಧ FIR

ಹುಬ್ಬಳ್ಳಿ/ಬೆಂಗಳೂರು: ಹುಬ್ಬಳ್ಳಿಯಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯ ಬಂಧನದ ವೇಳೆ ನಡೆದಿದೆ ಎನ್ನಲಾದ ಅಮಾನವೀಯ ಹಲ್ಲೆ ಮತ್ತು ವಿವಸ್ತ್ರಗೊಳಿಸಿದ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಈ ಗಂಭೀರ ಘಟನೆಯನ್ನು ರಾಷ್ಟ್ರೀಯ ಮಹಿಳಾ ಆಯೋಗವು (NCW) ಸ್ವಯಂ ಪ್ರೇರಿತವಾಗಿ (Suo Motu) ದಾಖಲಿಸಿಕೊಂಡ ಬೆನ್ನಲ್ಲೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಸೇರಿದಂತೆ ಒಟ್ಟು 9 ಜನರ ವಿರುದ್ಧ ಕೊಲೆ ಯತ್ನ ಹಾಗೂ ಗಲಭೆ ಪ್ರಕರಣ ದಾಖಲಾಗಿದೆ. ​ಕಾಂಗ್ರೆಸ್ ಪಾಲಿಕೆ ಸದಸ್ಯೆ ಸೇರಿ 9 ಮಂದಿ ವಿರುದ್ಧ ಕೇಸ್ ​ಈ…

Read More

​ಹುಬ್ಬಳ್ಳಿ ಬಿಗ್ ಟ್ವಿಸ್ಟ್: ಸುಜಾತಾ ಹಂಡಿ ಹೈಡ್ರಾಮಾ ವಿಡಿಯೋ ಬಯಲು; ತಾನೇ ಬಟ್ಟೆ ಬಿಚ್ಚಿ ಪೊಲೀಸರಿಗೆ ಎಸೆದ ಬಿಜೆಪಿ ಕಾರ್ಯಕರ್ತೆ!

ಹುಬ್ಬಳ್ಳಿ: ನಗರದ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಬಂಧನ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಪೊಲೀಸರ ಮೇಲೆ ಕೇಳಿಬಂದಿದ್ದ ಆರೋಪಗಳು ಸುಳ್ಳೆಂದು ಸಾಬೀತುಪಡಿಸುವ ವಿಡಿಯೋ ಸಾಕ್ಷ್ಯಗಳು ಈಗ ಲಭ್ಯವಾಗಿವೆ. ಪೊಲೀಸರು ಮಹಿಳೆಯೊಬ್ಬರ ಮೇಲೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಿದ್ದವರ ಬಾಯಿ ಮುಚ್ಚಿಸುವಂತೆ, ಸುಜಾತಾ ಹಂಡಿ ಪೊಲೀಸ್ ವಾಹನ ಹತ್ತುವಾಗ ತಾನೇ ಸ್ವತಃ ಬಟ್ಟೆಗಳನ್ನು ಬಿಚ್ಚಿ ಎಸೆಯುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಘಟನೆಯ ಕುರಿತು ಸ್ಪಷ್ಟನೆ ನೀಡಿರುವ ಹುಬ್ಬಳ್ಳಿ-ಧಾರವಾಡ…

Read More

ಹುಬ್ಬಳ್ಳಿ: ಬಿಜೆಪಿ ಮಹಿಳಾ ಕಾರ್ಯಕರ್ತೆಯ ಮೇಲೆ ಪೊಲೀಸ್ ದರ್ಪದ ಆರೋಪ; ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಕ್ಕೆ ಆಕ್ರೋಶ

ಹುಬ್ಬಳ್ಳಿ: ನಗರದ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯೊಬ್ಬರನ್ನು ವಿವಸ್ತ್ರಗೊಳಿಸಿ, ಅಮಾನುಷವಾಗಿ ಥಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರ ಈ ಅಮಾನುಷ ಕೃತ್ಯಕ್ಕೆ ಎಲ್ಲೆಡೆ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದು, ಕಾನೂನು ಸುವ್ಯವಸ್ಥೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ. ​ಮಾಜಿ ಕಾಂಗ್ರೆಸ್ ಕಾರ್ಯಕರ್ತೆಯಾಗಿದ್ದು ಇತ್ತೀಚೆಗೆ ಬಿಜೆಪಿ ಸೇರಿದ್ದ ಸುಜಾತಾ (ಅಲಿಯಾಸ್ ವಿಜಯಲಕ್ಷ್ಮಿ) ಹಂಡಿ ಎಂಬುವವರೇ ಪೊಲೀಸರ ಈ ದೌರ್ಜನ್ಯಕ್ಕೆ ಒಳಗಾದವರು ಎನ್ನಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಸುಜಾತಾ…

Read More

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ದೇಶದ ಮೊದಲ ‘ಫ್ಲೈಬ್ರರಿ’ (ಗ್ರಂಥಾಲಯ) ಲೋಕಾರ್ಪಣೆ: ಓದಿನ ಸಂಭ್ರಮದಲ್ಲಿ ವಿಮಾನ ಪ್ರಯಾಣಿಕರು

ಹುಬ್ಬಳ್ಳಿ: ವಾಣಿಜ್ಯ ನಗರಿಯ ವಿಮಾನ ನಿಲ್ದಾಣದಲ್ಲಿ ವಿನೂತನ ಪ್ರಯೋಗವೊಂದು ಆರಂಭವಾಗಿದ್ದು, ಭಾರತದ ಮೊದಲ ‘ಫ್ಲೈಬ್ರರಿ’ (Flybrary – ವಿಮಾನ ನಿಲ್ದಾಣದ ಗ್ರಂಥಾಲಯ) ಭಾನುವಾರ ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿತು. ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಹಾಗೂ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಈ ವಿಶೇಷ ಲೈಬ್ರರಿಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಯಿತು. ಗ್ರಂಥಾಲಯಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ ಅವರು, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ತಾಸುಗಟ್ಟಲೆ…

Read More

​ಹುಬ್ಬಳ್ಳಿ: ಉಣಕಲ್ ಬಳಿ ಭೀಕರ ಅಪಘಾತ; ಬಿಆರ್‌ಟಿಎಸ್ ರಸ್ತೆಯಲ್ಲಿ ಚಿಗರಿ ಬಸ್-ಕಾರು ಮುಖಾಮುಖಿ ಡಿಕ್ಕಿ

​ಹುಬ್ಬಳ್ಳಿ: ನಗರದ ಉಣಕಲ್ ಬಳಿಯ ಬಿಆರ್‌ಟಿಎಸ್ (BRTS) ಕಾರಿಡಾರ್‌ನಲ್ಲಿ ಇಂದು ಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಹುಬ್ಬಳ್ಳಿಯಿಂದ ಧಾರವಾಡದ ಕಡೆಗೆ ತೆರಳುತ್ತಿದ್ದ ‘ಚಿಗರಿ’ ಬಸ್ ಹಾಗೂ ಎದುರುಗಡೆಯಿಂದ ಬರುತ್ತಿದ್ದ ನೆಕ್ಸಾನ್ ಕಾರಿನ ನಡುವೆ ಸಂಭವಿಸಿದ ಈ ಮುಖಾಮುಖಿ ಡಿಕ್ಕಿಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ​ಭಾನುವಾರ ಬೆಳಿಗ್ಗೆ ಈ ಅವಘಡ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಕಾರು ಹಾಗೂ ಬಸ್ಸಿನ ಮುಂಭಾಗ ಜಖಂಗೊಂಡಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣವೇ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಗಾಯಾಳುಗಳಿಗೆ…

Read More

ಶೋಷಿತರ ಶೌರ್ಯದ ಸಂಕೇತ ಭೀಮಾ ಕೋರೆಗಾಂವ್ ವಿಜಯೋತ್ಸವ: ಮೇಯರ್ ಜ್ಯೋತಿ ಪಾಟೀಲ

ಹುಬ್ಬಳ್ಳಿ: ಭೀಮಾ ಕೋರೆಗಾಂವ್ ಯುದ್ಧವು ಭಾರತದ ಜಾತಿ ವ್ಯವಸ್ಥೆಯಲ್ಲಿ ನಲುಗಿಹೋದ ಶೋಷಿತ ಸಮುದಾಯವು ಶೌರ್ಯದಿಂದ ಜಯಿಸಿದ ಮಹಾನ್ ಹೋರಾಟವಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ ಅವರು ಬಣ್ಣಿಸಿದರು. ನಗರದ ಸಿದ್ಧಾರ್ಥ ಸರ್ಕಲ್‌ನಲ್ಲಿ ಸಮತಾ ಸೈನಿಕ ದಳ ಹಾಗೂ ಹುಬ್ಬಳ್ಳಿ-ಧಾರವಾಡ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ‘ಭೀಮಾ ಕೋರೆಗಾಂವ್ ವಿಜಯೋತ್ಸವ’ ಹಾಗೂ ಹಿರಿಯ ಮುಖಂಡ ಆಯುಷ್ಮಾನ್ ಪಿತಾಂಬರಪ್ಪ ಬಿಳಾರ ಅವರ 73ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. 1818ರ…

Read More