ಮೆಕ್ಕೆಜೋಳ ಖರೀದಿ ವಂಚನೆಯಲ್ಲಿ ಕುಂದಗೋಳ ಪಿಎಸ್ಐ ( ಪೋಲಿಸ್ ಸಬ್ ಇನ್ಸಪೆಕ್ಟರ) ಶಾಮೀಲು ಆರೋಪ
ಕುಂದಗೋಳ : ದಾವಣಗೆರೆ ಮೂಲದ ವ್ಯಕ್ತಿಯೊಬ್ಬ ಸ್ಥಳೀಯ ರೈತರೊಬ್ಬರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮೆಕ್ಕೆಜೋಳ ಖರೀದಿಸಿ ವಂಚಿಸಿರುವ ಪ್ರಕರಣದಲ್ಲಿ ಕುಂದಗೋಳ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರೇ ಆರೋಪಿಯೊಂದಿಗೆ ಶಾಮೀಲಾಗಿದ್ದಾರೆ ಎಂದು ರೈತಪರ ಹೋರಾಟಗಾರ ಮಹೇಶ ಬ. ಕಲಘಟಗಿ ಗಂಭೀರ ಆರೋಪ ಮಾಡಿದ್ದಾರೆ. ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಅವರು, ದಾವಣಗೆರೆ ಮೂಲದ ಕೆ.ಎಸ್. ಪ್ರಶಾಂತ ಎಂಬ ವ್ಯಕ್ತಿಯು ಕಳೆದ ಜನವರಿ 4, 2026 ರಂದು ಸಂಶಿ ಗ್ರಾಮದ…

