ನವಲಗುಂದ ಪೊಲೀಸ್ ಠಾಣೆ: ಮನೆ ಕಳ್ಳತನ ಪ್ರಕರಣ ಭೇದಿಸಿ 7 ಗಂಟೆಯೊಳಗೆ 7.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ!
ಧಾರವಾಡ: ನವಲಗುಂದ ಪಟ್ಟಣದಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ನವಲಗುಂದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಭೇದಿಸಿದ್ದಾರೆ. ಕಳ್ಳತನ ನಡೆದ ಕೇವಲ 6 ಗಂಟೆಯೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು 7.5 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ವಿವರ: ಡಿಸೆಂಬರ್ 1, 2025 ರಂದು ಜಗದೀಶ ವೀರುಪಾಕ್ಷಪ್ಪ ಮುಳ್ಳೂರ ಎಂಬುವವರು ನವಲಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನವೆಂಬರ್ 29, 2025 ರ ಬೆಳಿಗ್ಗೆ 10 ಗಂಟೆಯಿಂದ ನವೆಂಬರ್…

